ಸೋಮವಾರ, ಫೆಬ್ರವರಿ 24, 2020
19 °C

‘ತುಳವರಿಗೆ ಶೇ 80 ರಷ್ಟು ಉದ್ಯೋಗ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ ಶೇ 80 ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಉದ್ಯೋಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಗುರುವಾರ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ, ತುಳುನಾಡಿನಲ್ಲಿ ವಾಸಿಸುವ ಯುವಕರಿಗೆ ಸ್ಥಳೀಯ ಕೈಗಾರಿಕೆಗಳಲ್ಲಿ ಸೂಕ್ತ ಉದ್ಯೋಗ ಸಿಗುತ್ತಿಲ್ಲ. ಇದರಿಂದ ಯುವಕರು ಉದ್ಯೋಗ ಅರಸಿಕೊಂಡು ಬೇರೆ ಕಡೆ ಹೋಗುವಂತಾಗಿದೆ. ಹಾಗಾಗಿ ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ ಶೇ 80 ಉದ್ಯೋಗ ಮೀಸಲು ನೀಡಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಹಿಂದೂ ಸಭಾ ಮುಖಂಡರಾದ ರಾಜೇಶ್ ಪವಿತ್ರನ್, ವಕೀಲ ರಾಘವೇಂದ್ರ ರಾವ್ ಮಾತನಾಡಿದರು.

ಪ್ರತಿಭಟನೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಜೆ. ಇಬ್ರಾಹಿಂ, ಆನಂದ ಅಮೀನ್ ಅಡ್ಯಾರ್, ರಮೇಶ್ ಪೂಜಾರಿ ಶೀರೂರು, ದೇವಿಪ್ರಸಾದ್ ವಾಮದಪದವು, ರಮೇಶ್ ಶೆಟ್ಟಿ ಮಜಲೋಡಿ, ಸುಭಾಷ್, ಸುದನ್, ಹಸನ್ ಅಡ್ಡೂರು, ಫಾರೂಕ್ ಗೋಲ್ಡನ್, ಅಝೀಝ್ ಉಳ್ಳಾಲ್, ಹಮೀದ್ ಕಾವೂರು, ಹರೀಶ್ ಶೆಟ್ಟಿ ಶಕ್ತಿನಗರ, ಶ್ರೀನಿವಾಸ ಉರ್ವ, ರೋಶನ್ ಶೇಡಿಗುರಿ, ಇರ್ಫಾನ್ ಕಲ್ಲಾಪು, ಶೋಹನ್ ಬೆಂದೂರು, ಗೈಟನ್ ರಾಡ್ರಿಗಸ್, ಜನಾರ್ದನ್ ಬೆಂಗ್ರೆ, ಸತೀಶ್ ಸಾಲ್ಯಾನ್, ಶಾರದಾ ಬಿಕರ್ನಕಟ್ಟೆ, ತನ್ವೀರ್, ಬ್ರಿಜೇಶ್, ವಿದ್ಯಾರ್ಥಿ ಮುಖಂಡರಾದ ಗುರುದತ್ತ ಮಲ್ಲಿ, ಭಾಷಿತ್, ತುಷಾರ್ ಕದ್ರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)