ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಣಪತಿ ದರ್ಶನಕ್ಕೆ ಅವಕಾಶ ಕಲ್ಪಿಸಿ’

Last Updated 6 ಸೆಪ್ಟೆಂಬರ್ 2021, 17:08 IST
ಅಕ್ಷರ ಗಾತ್ರ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಒಳಾಂಗಣದಲ್ಲಿ ಇರುವ ಗಣಪತಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇಲ್ಲ. ಈ ಬಾರಿಯ ಗಣೇಶ ಚತುರ್ಥಿಯ ಸಂದರ್ಭದಲ್ಲಾದರೂ ಗಣಪತಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಟಿ.ಎಸ್. ಶ್ರೀನಾಥ ಅವರು, ‘ಗಣೇಶ ಚತುರ್ಥಿ ದಿನದಂದು ಗರ್ಭಗುಡಿಯ ಒಳಗೆ ಗಣಪತಿ ಹೋಮ ನಡೆಸುವಾಗ, ಒಳಗೆ ಇರುವ ದೇವರ ವಿಗ್ರಹವನ್ನು ಗರ್ಭಗುಡಿಯ ಮಂಟಪದಲ್ಲಿ ಭಕ್ತರಿಗೆ ಕಾಣುವ ರೀತಿಯಲ್ಲಿ ಇಟ್ಟು ಗಣಪತಿ ಹೋಮ ನಡೆಸಬೇಕು’ ಎಂದು ಒತ್ತಾಯಿಸಿದರು.

ದೇವಳದ ಗರ್ಭಗುಡಿಯ ಬಡಗು ಪಾರ್ಶ್ವದಲ್ಲಿ ಗಣಪತಿ ವಿಗ್ರಹ ಇದೆ ಎಂಬುದಾಗಿ ದಾಖಲೆಗಳು ಹೇಳುತ್ತವೆ. ಈ ಲೋಹದಿಂದ ತಯಾರಿಸಿದ ವಿಗ್ರಹವನ್ನು ಬೆಳ್ಳಿಯ ಪಾಣಿಪೀಠದಲ್ಲಿ ಇಟ್ಟಿದ್ದು, ಪುರಾತನ ಕೆತ್ತನೆ ಇದೆ. 10.5 ಇಂಚು ಉದ್ದ, 7 ಇಂಚು ಅಗಲ ಇರಬಹುದು ಎಂದು ದಾಖಲೆಯಲ್ಲಿ ಉಲ್ಲೇಖವಾಗಿದೆ. ಭಕ್ತರಿಗೆ ದರ್ಶನ ನೀಡಬೇಕಾದ ಗಣಪತಿ ವಿಗ್ರಹದ ದರ್ಶನ ಭಕ್ತರಿಗೆ ಇಲ್ಲದಿರುವುದು ಶಾಸ್ತ್ರ ಸಮ್ಮತವೂ ಅಲ್ಲ. ಇದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಚಾರವೂ ಆಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT