ಪುತ್ತೂರು: ಇಲ್ಲಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ 33ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳವು ಮಹಾಲಿಂಗೇಶ್ವರ ದೇವಳದ ಮುಂಭಾಗದ ದೇವರಮಾರು ಗದ್ದೆಯಲ್ಲಿ ಶನಿವಾರ ಬೆಳಿಗ್ಗೆ ಆರಂಭಗೊಂಡಿತು.

ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸಲಾಯಿತು. ಕಂಬಳ ಕೋಣಗಳೊಂದಿಗೆ ಕಂಬಳ ಸಮಿತಿ ಪದಾಧಿಕಾರಿಗಳು ಮತ್ತು ಕಂಬಳಾಭಿಮಾನಿಗಳು ಮೆರವಣಿಗೆ ನಡೆಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಕಂಬಳ ಸಮಿತಿ ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ ಅವರು ಚಾಲನೆ ನೀಡಿದರು.

‘32 ವರ್ಷಗಳಿಂದ ವ್ಯವಸ್ಥಿತಿತವಾಗಿ ಹಲವು ವಿಶೇಷತೆಗಳೊಂದಿಗೆ ಯಶಸ್ಸು ಕಾಣುತ್ತಾ ಬಂದಿರುವ ಪುತ್ತೂರು ಕಂಬಳವು ರಾಜ್ಯ ಮಟ್ಟದಲ್ಲೇ ಮೇಲುಗೈ ಸಾಧಿಸಿದೆ. ಕಂಬಳ ಕೂಟದಲ್ಲಿ ಪ್ರಪ್ರಥಮವಾಗಿ ಅಕ್ಕಿ ಮುಡಿ, 2 ಪವನ್ ಚಿನ್ನದ ಬಹುಮಾನ, ಟ್ರೋಫಿ ನೀಡಲು ಪ್ರಾರಂಭಿಸಿರುವ, ಕಂಬಳ ಕೂಟದಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಓಟ, ರಿಲೇ ಸ್ಪರ್ಧೆಯ ಮೂಲಕ ಹೆಚ್ಚು ಜನ ಸೇರುವ ಪುತ್ತೂರು ಕಂಬಳವು ಕಂಬಳಕೂಟದ ವ್ಯವಸ್ಥೆಗೆ ವಿಶೇಷ ಮೆರಗು ನೀಡಿದೆ. ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರು ಕಂಬಳದಲ್ಲಿ ಹೊಸತನ ತಂದಿದ್ದಾರೆ ಎಂದರು.

ಕಾಂಗ್ರೆಸ್ ನಾಯಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆಯ ಪೌರಾಯುಕ್ತೆ ವಿದ್ಯಾ ಆರ್.ಕಾಳೆ, ಕಂಬಳ ಸಮಿತಿ ಸಂಚಾಲಕ ಕೆ.ವಸಂತ ಕುಮಾರ್ ರೈ ದುಗ್ಗಳ, ವಿವಿಧ ಕ್ಷೇತ್ರದ ಪ್ರಮುಖರಾದ ಪದ್ಮನಾಭ ಶೆಟ್ಟಿ, ದಿವ್ಯಾ ಕೆ.ಶೆಟ್ಟಿ, ಡಾ.ಶರಣ್ ಶೆಟ್ಟಿ, ಬಾಬು ಶೆಟ್ಟಿ, ಜಯಂತ ನಡುಬೈಲು, ದಿವಾಕರ ರೈ ಸಣಂಗಳ, ರವೀಂದ್ರ ಶೆಟ್ಟಿ ನುಳಿಯಾಲು, ಚೆನ್ನಪ್ಪ ರೈ ದೇರ್ಲ, ಮೌರೀಸ್ ಮಸ್ಕರೇನಸ್, ವಲೇರಿಯನ್ ಡಯಾಸ್, ಅಬ್ದುಲ್ ರಹಿಮಾನ್, ಪ್ರವೀಣ್ ಶೆಟ್ಟಿ ಅಳಕೆಮಜಲು, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಅಶ್ರಫ್ ಬಸ್ತಕ್ಕಾರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಭಾಗ್ಯೇಶ್ ರೈ, ವಿನಯ ಸುವರ್ಣ, ಪ್ರಶಾಂತ್ ರೈ ಕೈಕಾರ, ಮಹಾಬಲ ರೈ ಒಳತ್ತಡ್ಕ, ಡಾ.ರಾಜಾರಾಮ್ ಕೆ.ಬಿ., ಕೃಷ್ಣಪ್ರಸಾದ್ ಆಳ್ವ, ಚಂದ್ರಪ್ರಭಾ ಗೌಡ, ಸುಂದರ ಗೌಡ ನಡುಮನೆ, ಅಜಿತ್ ರೈ ಕಡಬ, ಝೋಹರಾ ನಿಸಾರ್ ಭಾಗವಹಿಸಿದ್ದರು.

ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ. ವಂದಿಸಿದರು. ದಯಾನಂದ ರೈ ಕೊಮ್ಮಂಡ ಮತ್ತು ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.