ಪುತ್ತೂರು: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ದ.ಕ.ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜ.10ರಿಂದ 12ರ ವರೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಜಾತ್ರಾ ಗದ್ದೆಯಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಹಾಗೂ ಸಸ್ಯ ಜಾತ್ರೆಯ ಆಮಂತ್ರಣ ಬಿಡುಗಡೆ, ಪೂರ್ವಭಾವಿ ಸಭೆ ಶುಕ್ರವಾರ ನಡೆಯಿತು.

ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಅಧ್ಯಕ್ಷತೆ ವಹಿಸಿದ್ದರು.

ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಕಾರ್ಯಕ್ರಮದ ಸಿದ್ಧತೆ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಪುತ್ತೂರು ಉಪವಿಭಾಗದ ಉಪಕೃಷಿ ನಿರ್ದೇಶಕ ಶಿವಶಂಕರ ದಾನೇಗೊಂಡರ ಮಾತನಾಡಿ, ವಿಜ್ಞಾನಿಗಳು ಹಾಗೂ ಯಶಸ್ವಿ ಕೃಷಿಕರಿಂದ ರೈತರಿಗೆ ವಿಚಾರಗೋಷ್ಠಿ ಹಾಗೂ ಕೃಷಿ ಮೇಳದ ಪೂರ್ವಭಾವಿಯಾಗಿ ಸಿರಿಧಾನ್ಯ ಕುರಿತು ಜಾಗೃತಿ ಮೂಡಿಸುವ ವಾಕಥಾನ್ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಮಳಿಗೆಗಳ ನಿರ್ವಹಣೆ ಮಾಡಲಿರುವ ರೈತ ಕುಡ್ಲ ಪ್ರತಿಷ್ಠಾನದ ಭರತ್ರಾಜ್ ಸೊರಕೆ, ಸುಹಾಸ್ ಮರಿಕೆ ಅವರು ಮಾಹಿತಿ ನೀಡಿ 150ಕ್ಕೂ ಅಧಿಕ ಮಳಿಗೆಗಳು ಕೃಷಿ ಮೇಳದಲ್ಲಿ ಇರಲಿವೆ ಎಂದರು.

ಪ್ರಮುಖರಾದ ಪದ್ಮನಾಭ ರೈ ಕಲ್ಲಡ್ಕ, ಕುಸುಮಾಧರ ಎ.ಟಿ., ಚಂದ್ರ ಕೋಲ್ಚಾರು, ಸುಭಾಶ್ ರೈ ಬೆಳ್ಳಿಪ್ಪಾಡಿ, ಪಿ.ಕೆ.ರಾಜು ಪೂಜಾರಿ ಬೆಳ್ತಂಗಡಿ, ಮಹಾವೀರ ಜೈನ್ ಬೆಳ್ತಂಗಡಿ, ತಾರಾನಾಥ ಕಾಯರ್ಗ, ಶರತ್ ಅಡ್ಕಾರು, ಬಾಳಪ್ಪ ಪೂಜಾರಿ ಬಂಬಿಲದೋಳ, ಇ.ಎಸ್.ವಾಸುದೇವ ಇಡ್ಯಾಡಿ, ರಾಜಾರಾಮ ಪ್ರಭು, ಸುರೇಶ್ ರೈ ಸೂಡಿಮುಳ್ಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಬಾಲಕೃಷ್ಣ ಎಂ., ಸುಕುಮಾರ ಕೆ.ಆರ್.ಶಿರಾಡಿ, ಗೋವಿಂದ ಬೋರ್ಕರ್ ಪುತ್ತೂರು, ಪಾಂಡುರಂಗ ಹೆಗ್ಡೆ, ಎ.ಪಿ.ಸದಾಶಿವ ಮರಿಕೆ, ಪ್ರವೀಣ್ ಚೆನ್ನಾವರ, ಬಾಲಕೃಷ್ಣ ಗೌಡ ಕಬಕ, ಸಂಜೀವ ಶೆಟ್ಟಿ, ವಿನೋದ್ ಕುಮಾರ್ ರೈ ಮುಂಡಾಳ, ಸುದರ್ಶನ ಶಿರಾಡಿ, ವಿನೋದ್ ಶೆಟ್ಟಿ, ರಾಮಪ್ರಸಾದ್ ಬಿ.ಎಸ್., ಧನಂಜಯ ಬೆದ್ರೋಡಿ, ದಿವ್ಯಪ್ರಸಾದ್, ಸಹಾಯಕ ಕೃಷಿ ನಿರ್ದೇಶಕ ಚೆಲುವರಂಗಪ್ಪ ಟಿ.ಜಿ., ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಜಿ.ಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.