ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಮಹಾಲಿಂಗೇಶ್ವರ ದೇವಳದ ಜಾತ್ರೋತ್ಸವ 10ರಿಂದ

ಪುತ್ತೂರು: ಪಂಜುರ್ಲಿ ದೈವಕ್ಕೆ ಅಣಿ; ₹ 7 ಲಕ್ಷ ವೆಚ್ಚದ ಸುಡುಮದ್ದು ಪ್ರದರ್ಶನ-ಕೇಶವ ಪ್ರಸಾದ್
Last Updated 7 ಏಪ್ರಿಲ್ 2023, 12:56 IST
ಅಕ್ಷರ ಗಾತ್ರ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವ ಇದೇ 10ರಿಂದ 20ರ ವರೆಗೆ ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಳದ ಪುಷ್ಕರಣಿಯಲ್ಲಿ ಶಿಲಾಮಯ ಕಟ್ಟೆಯ ಕಾಮಗಾರಿ ಶನಿವಾರ ಸಂಪೂರ್ಣಗೊಳ್ಳಲಿದೆ. ಧ್ವಜಾರೋಹಣದ ಮೊದಲ ದಿನ ಸಂಜೆ ವಾಸ್ತುಪೂಜೆ, ವಾಸ್ತುಬಲಿ, ರಾಕ್ಷೋಘ್ನ ಹೋಮ ನಡೆಯಲಿದ್ದು ಧ್ವಜಾರೋಹಣದ ಬಳಿಕ ಪುಷ್ಕರಣಿಯ ತಳಭಾಗದ ವರುಣ ದೇವರಿಗೆ ಸಾಮೂಹಿಕ ವರುಣ ಪೂಜೆ ನಡೆಯಲಿದೆ. ಭಕ್ತರಿಗೆ ವೀಕ್ಷಣೆ, ಸೇವಾ ಪೂಜೆಗೆ ಅವಕಾಶವಿದೆ ಎಂದರು.

ಏಪ್ರಿಲ್ 8ರಂದು ಮಧ್ಯಾಹ್ನ 3.30ಕ್ಕೆ ದರ್ಬೆ ವೃತ್ತ ಹಾಗೂ ಬೊಳುವಾರು ಸುಬ್ರಹ್ಮಣ್ಯ ನಗರದಿಂದ ಏಕಕಾಲದಲ್ಲಿ ಹಸಿರುವಾಣಿ ಮೆರವಣಿಗೆಗೆ ಆರಂಭವಾಗಲಿದೆ. ಕೊಂಬು, ಕಹಳೆ, ಕುಣಿತ ಭಜನೆ ಮೆರವಣಿಗೆಗೆ ಮೆರುಗು ತುಂಬಲಿದ್ದು ಧಾರ್ಮಿಕ ಶಿಕ್ಷಣ ಪಡೆಯುವ 15 ಕೇಂದ್ರಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಈ ಬಾರಿ ಪಂಜುರ್ಲಿ ದೈವಕ್ಕೆ ಅಣಿ ಕಟ್ಟಲಾಗುವುದು. ₹ 7 ಲಕ್ಷ ವೆಚ್ಚದಲ್ಲಿ ಸುಡುಮದ್ದು ಪ್ರದರ್ಶನ ನಡೆಯಲಿದೆ. ಮದ್ದು ಸುಡುವವರನ್ನು ಅಣಕು ಪ್ರದರ್ಶನದ ಮೂಲಕ ಆಯ್ಕೆ ಆಯ್ಕೆಮಾಡಲಾಗಿದೆ ಎಂದು ಅವರು ವಿವರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಪ್ರತಿ ದಿನ 12.30ರಿಂದ 3 ಗಂಟೆ ತನಕ ಅನ್ನಸಂತರ್ಪಣೆ ಇರುತ್ತದೆ. ಇದಕ್ಕಾಗಿ 500 ಸ್ವಯಂಸೇವಕರು ಸಿದ್ಧರಾಗಿದ್ದಾರೆ. ಅನ್ನಸಂತರ್ಪಣೆಗೆ ಚುನಾವಣೆ ಯಾವುದೇ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದರು.

ಸದಸ್ಯ ಬಿ.ಐತ್ತಪ್ಪ ನಾಯ್ಕ್, ಸಂಜೆ 5ರಿಂದ ರಾತ್ರಿ 11ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಊಟದ ವ್ಯವಸ್ಥೆಗೆ ಒಂದೇ ಪೆಂಡಾಲ್‌ ಬಳಸಲಾಗುವುದು ಎಂದರು. 2 ಜೈಂಟ್ ವ್ಹೀಲ್ ಸೇರಿ 250 ಮಳಿಗೆಗಳು ಇರಲಿದ್ದು ಮಳಿಗೆಗಳನ್ನು ಕಡಿಮೆ ಬಿಡ್‌ಗೆ ನೀಡಲಾಗಿದೆ. 9ರಂದು ಬೆಳಿಗ್ಗೆ 7ರಿಂದ 10ರ ತನಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿ ಎಂದು ಸದಸ್ಯ ರಾಮಚಂದ್ರ ಕಾಮತ್ ತಿಳಿಸಿದರು.
ಸದಸ್ಯ ಶೇಖರ ನಾರಾವಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ವೀಣಾ ಬಿ.ಕೆ ಇದ್ದರು.

ಸಾಂಪ್ರದಾಯಿಕ ಉಡುಗೆ

ಏಪ್ರಿಲ್ 17ರಂದು ರಾತ್ರಿ ಬ್ರಹ್ಮ ರಥೋತ್ಸವ ನಡೆಲಿದೆ. ರಥ ಎಳೆಯುವವರು ಪಂಚೆ, ಶಲ್ಯ ಒಳಗೊಂಡ ಸಾಂಪ್ರದಾಯಿಕ ಉಡುಗೆಯೊಂದಿಗೆ ಬರಬೇಕು. ವರುಣ ದೇವರಿಗೆ ಪೂಜೆ ಸಲ್ಲಿಸುವವರು ಕೂಡ ಸಾಂಪ್ರದಾಯಿಕ ಉಡುಗೆ ತೊಟ್ಟು ಬರಬೇಕು ಎಂದು ಕೇಶವ ಪ್ರಸಾದ್ ಮುಳಿಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT