ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ಹೆಬ್ಬಾವಿನ ಮರಿ ಕಾಡಿಗೆ

Last Updated 24 ಜೂನ್ 2022, 2:21 IST
ಅಕ್ಷರ ಗಾತ್ರ

ಮಂಗಳೂರು: ನಗರದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದ ಸಮೀಪ ದೊರೆತಿದ್ದ ಹಾವಿನ ಮೊಟ್ಟೆಯಿಂದ ಎಂಟು ಮರಿಗಳು ಹೊರಬಂದಿವೆ.

ಶಮಿತ್ ಸುವರ್ಣ ಎಂಬವವರಿಗೆ ಕಟ್ಟಡ ‌ಕೆಲಸ‌ ನಿರ್ಮಾಣದ ಸಂದರ್ಭದಲ್ಲಿ ಕಂಡ ಹಾವಿನ ಮೊಟ್ಟೆಯ ಬಗ್ಗೆ ಉರಗ ಪ್ರೇಮಿ ಅಜಯ್ ಅವರಿಗೆ ಮಾಹಿತಿ ನೀಡಿದ್ದರು. ಅವರು ಉರಗ ರಕ್ಷಕ ಸ್ನೇಕ್ ಕಿರಣ್ ಸಹಕಾರದಲ್ಲಿ ಮೊಟ್ಟೆಗಳಿಗೆ ಕೃತಕ‌ ಕಾವು ಕೊಟ್ಟು, ಇದರಿಂದ ಹೊರಬಂದ ಎಂಟು ಹೆಬ್ಬಾವು ಮರಿಗಳನ್ನು ಬಂಟ್ವಾಳ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ ಮಾರ್ಗದರ್ಶನದಂತೆ ಅರಣ್ಯಕ್ಕೆ ಬಿಡಲಾಗಿದೆ.

ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್.‌ ಪೂಜಾರಿ, ಅರಣ್ಯ ರಕ್ಷಕ ಶೋಭಿತ್ ರಾಜ್, ಅಜಯ್, ವಾಹನ ಚಾಲಕ ಜಯರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT