ಮಂಗಳವಾರ, ಜೂನ್ 15, 2021
24 °C

ಬೆಳ್ತಂಗಡಿ ಗಾಳಿ–ಮಳೆ: ಮರೋಡಿಯಲ್ಲಿ ಸಿಡಿಲು ಬಡಿದು ದನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಗುಡುಗು– ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಕೆಲವೆಡೆ ಹಾನಿಯಾದ ವರದಿಯಾಗಿದೆ.

ಮರೋಡಿ ಗ್ರಾಮದ ಕುಡ್ಯರಬೆಟ್ಟು ಯಶೋಧರ ಬಂಗೇರ ಅವರ ಮನೆಗೆ ಸಿಡಿಲು ಬಡಿದು, ವಿದ್ಯುತ್ ಉಪಕರಣ ಗಳಿಗೆ ಹಾನಿಯಾಗಿದೆ. ದನವೊಂದು ಸ್ಥಳದಲ್ಲಿಯೇ ಮೃತಪಟ್ಟಿದೆ.

ಬೆಳ್ತಂಗಡಿ– ಉಪ್ಪಿನಂಗಡಿ ಹೆದ್ದಾರಿಯ ಉರುವಾಲು ಗ್ರಾಮದ ಹಲೇಜಿ ಬಳಿ ಸಂಜೀವ ಮೂಲ್ಯ ಅವರ ಅಂಗಳದಲ್ಲಿದ್ದ ತೆಂಗಿನ ಮರವೊಂದು ರಸ್ತೆಗೆ ಬಿದ್ದು, ಒಂದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಇದರಿಂದ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ತಡೆಯಾಗಿದ್ದು, ಸ್ಥಳೀಯರು ಮರವನ್ನು ತೆರವುಗೊಳಿಸಿದರು.

ಉರುವಾಲು ಗ್ರಾಮದ ಹಲೇಜಿ ಬಳಿ ಸುಧೀರ್ ಕೆ.ಎನ್. ಅವರ 10 ಅಡಿಕೆ ಮರ, ಹಲೇಜಿ ಸುಶೃತ ಭಟ್‌ ಅವರ 15 ಅಡಿಕೆ ಮರ, ಮಚ್ಚಿನ ಗ್ರಾಮದ ಕಲಾಯಿ ಪ್ರಶಾಂತ್ ಅವರ 5 ಅಡಿಕೆ ಗಿಡ ಧರೆಗೆ ಉರುಳಿವೆ. ಪ್ರಶಾಂತ್‍ ಅವರ ಪಂಪ್‌ಶೆಡ್‌ ಮೇಲೆ ಮರ ಬಿದ್ದು ಹಾನಿಯಾಗಿದೆ. ಗರ್ಡಾಡಿ ಉದಲೋಡಿ ವಸಂತ ಭಂಡಾರಿ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು