ಬುಧವಾರ, ಮಾರ್ಚ್ 29, 2023
32 °C
ರಾಮಕುಂಜ ಹಾಲು ಉತ್ಪಾದಕರ ಸಂಘ

ಉಪ್ಪಿನಂಗಡಿ: ₹ 15.97 ಕೋಟಿ ವ್ಯವಹಾರ, ₹ 5.65 ಲಕ್ಷ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ರಾಮಕುಂಜ ಹಾಲು ಉತ್ಪಾದಕರ ಸಂಘವು 2020-21ನೇ ಸಾಲಿನಲ್ಲಿ ₹15. 97 ಕೋಟಿ ವ್ಯವಹಾರ ನಡೆಸಿದ್ದು, ₹5.65 ಲಕ್ಷ  ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 12ರಷ್ಟು ಲಾಭಾಂಶ ವಿತರಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ಕೆ. ಮುರಳೀಕೃಷ್ಣ ಬಡಿಲ ಹೇಳಿದರು.

ರಾಮಕುಂಜ ಹಾಲು ಉತ್ಪಾದಕರ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

’ಸಂಘವು ಕಳೆದ ಸಾಲಿನಲ್ಲಿ  ಸದಸ್ಯರಿಂದ 4.10  ಲಕ್ಷ ಲೀಟರ್ ಹಾಲು ಖರೀದಿಸಿದ್ದು, 1.39 ಲಕ್ಷ ಲೀಟರ್‌ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿದೆ. ಹಾಲಿನ ವ್ಯಾಪಾರದಿಂದ ₹11.29 ಲಕ್ಷ ಆದಾಯ ಬಂದಿರುತ್ತದೆ. ಪಶು ಆಹಾರ ಮಾರಾಟದಿಂದ ₹47,055 ಲಾಭ ಬಂದಿದೆ’ ಎಂದರು.

ಸಂಘಕ್ಕೆ ಹೆಚ್ಚು ಹಾಲು ಮಾರಾಟ ಮಾಡಿದ ಒಬ್ಬ ಮಹಿಳಾ ಸದಸ್ಯೆಗೆ ಮತ್ತು ಇಬ್ಬರು ಪುರುಷ ಸದಸ್ಯರಿಗೆ ಬಹುಮಾನ ನೀಡಲಾಯಿತು. ಒಳ್ಳೆಯ ಗುಣಮಟ್ಟದ ಪ್ರಮಾಣದ ಆಧಾರದಲ್ಲಿ 6 ಮಂದಿಯನ್ನು ಗೌರವಿಸಲಾಯಿತು. ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾ ಅವರು ಹಾಲಿನ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಮತ್ತು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ನಿರ್ದೇಶಕ ಸುರೇಶ್ ನಾಯ್ಕ್ ಕೊಲ, ಕೆ. ಸತ್ಯ ಸುಂದರ ರಾವ್ ಹರ್ವೆ, ಬಿ. ಮೋನಪ್ಪ ಮೂಲ್ಯ ಬೊಳ್ಳರೋಡಿ, ರತ್ನಾವತಿ ಎಸ್. ಗೌಡ, ಭವಾನಿ ಕೆ. ಕಂಪ, ಸುನಂದ ಶೆಟ್ಟಿ ಪಡಿಪ್ಪಿರೆ, ಮಾಜಿ ಅಧ್ಯಕ್ಷ ಉದಯ ಕಶ್ಯಪ್, ವಾಸಪ್ಪ ಬಂಗ ಇದ್ದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಚಿತ್ತರಂಜನ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಯನ್. ಸುಬ್ರಹ್ಮಣ್ಯ ಭಟ್ ಬರೆಂಪಾಡಿ ವಂದಿಸಿದರು. ಪಿ. ಹರಿಪ್ರಸಾದ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.