ಮಂಗಳೂರು: ಅಮೆಜಾನ್ ಇಂಡಿಯಾ ಕಂಪನಿಯು ಆಗಸ್ಟ್ 27ರಿಂದ ನವೆಂಬರ್ 4ರ ನಡುವೆ ಅಮೆಜಾನ್.ಇನ್‌ಗೆ ಸೇರುವ ಹೊಸ ಮಾರಾಟಗಾರರಿಗೆ ರೆಫರಲ್ ಶುಲ್ಕದಲ್ಲಿ ಶೇ50ರ ವಿನಾಯಿತಿ ಘೋಷಿಸಿದೆ ಎಂದು ಕಂಪನಿಯ ಫುಲ್‍ಫಿಲ್‍ಮೆಂಟ್ ಚಾನೆಲ್ಸ್ ಮತ್ತು ಗ್ಲೋಬಲ್ ಟ್ರೇಡ್‍ನ ಉಪಾಧ್ಯಕ್ಷ ವಿವೇಕ್ ಸೋಮರೆಡ್ಡಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೇರ್ಪಡೆಗೊಂಡ ದಿನದಿಂದ 60 ದಿನಗಳವರೆಗೆ ಇದು ಮಾನ್ಯವಾಗಿರುತ್ತದೆ. ಹೊಸ ಮಾರಾಟಗಾರರಿಗೆ ಉತ್ತೇಜನ, ಮುಂಗಡ ವೆಚ್ಚ ಕಡಿತದ ಮೂಲಕ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ನೆಲೆಯನ್ನು ಸ್ಥಾಪಿಸಲು ನೆರವಾಗುವ ಗುರಿಯನ್ನು ಕಂಪನಿ ಹೊಂದಿದೆ. ಗ್ರೇಟ್ ಇಂಡಿಯನ್ ರೆಫರಲ್ ಆಫರ್‌ನಲ್ಲಿ ಮಾರಾಟಗಾರರು ಅಮೆಜಾನ್.ಇನ್‌ನಲ್ಲಿ ಮಾರಾಟ ಮಾಡಲು ತಮ್ಮ ಸ್ನೇಹಿತರನ್ನು ಹೆಸರಿಸಿ ₹11,500 ವರೆಗಿನ ಬಹುಮಾನ ಪಡೆಯಬಹುದು ಎಂದರು.

ಶೇ 78ಕ್ಕಿಂತ ಹೆಚ್ಚು ಗ್ರಾಹಕರು ಆನ್‍ಲೈನ್ ಶಾಪಿಂಗ್ ಅನ್ನು ಇಷ್ಟಪಡುತ್ತಾರೆ. ಶೇ 68ರಷ್ಟು ಗ್ರಾಹಕರು ಅಮೆಜಾನ್.ಇನ್ ಅನ್ನು ತಮ್ಮ ನೆಚ್ಚಿನ ಶಾಪಿಂಗ್ ತಾಣವೆಂದು ಗುರುತಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.