ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ನಗರದ ಹೊರವಲಯದಲ್ಲಿ ಜಮೀನು ಕಾಯ್ದಿರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.

ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಹರೀಶ್ ಪೂಂಜ, ‘ವೆನ್ಲಾಕ್ ಆಸ್ಪತ್ರೆಯ ಆವರಣ ಕಟ್ಟಡಗಳಿಂದ ತುಂಬಿಹೋಗಿದೆ. ಆಸ್ಪತ್ರೆಯ ವಿಸ್ತರಣೆ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸ್ಥಳಾವಕಾಶವಿಲ್ಲ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ, ‘ಮೂಡುಶೆಡ್ಡೆಯಲ್ಲಿ ಕ್ಷಯರೋಗದ ಆಸ್ಪತ್ರೆ ಸಮೀಪ 8 ಎಕರೆ ಲಭ್ಯವಿದೆ’ ಎಂದರು.
ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಸಾದ್ , ‘ವೆನ್ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ತೆರವುಗೊಳಿಸಿ, 4 ಮಹಡಿಗಳ ಹೊಸ ಕಟ್ಟಡ ನಿರ್ಮಾಣ ಶೀಘ್ರದಲ್ಲಿ ಆರಂಭವಾಗಲಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಹಾಸ್ಟೆಲ್: ‘ಜಿಲ್ಲೆಗೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಎರಡು ಹೆಚ್ಚುವರಿ ಹಾಸ್ಟೆಲ್ ಮಂಜೂರಾಗಿದೆ. ಬೇರೆ ಜಿಲ್ಲೆಗಳಿಗೆ ಮಂಜೂರಾದ ಹಾಸ್ಟೆಲ್ಗಳಿಗೆ ವಿದ್ಯಾರ್ಥಿಗಳ ಕೊರತೆ ಇದ್ದರೆ, ಅವುಗಳನ್ನು ನಮ್ಮ ಜಿಲ್ಲೆಗೆ ನೀಡುವಂತೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇನೆ’ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ತಿಳಿಸಿದರು.

ಮೂಲ್ಕಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ ಸ್ಥಾಪನೆಗೆ ಅನುಮತಿ ಕೊಡಿಸಬೇಕು. ಅದಕ್ಕೆ ಕಟ್ಟಡ ಲಭ್ಯ ಇದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.

‘ಸಹಕಾರಿ ಬ್ಯಾಂಕ್ಗಳಲ್ಲಿ ರೈತರಿಗೆ ನೀಡುವ ಶೂನ್ಯ ಬಡ್ಡಿದರದ ಸಾಲದ ಮೊತ್ತವನ್ನು ₹ 3 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಆದರೂ ಈ ಸವಲತ್ತು ರೈತರಿಗೆ ಸಿಗುತ್ತಿಲ್ಲ’ ಎಂದು ಅನೇಕ ಶಾಸಕರು ದೂರಿದರು. ನಬಾರ್ಡ್ನಿಂದ ಬರಬೇಕಾದ ₹ 2600 ಕೋಟಿ ಕಡಿತವಾಗಿದ್ದರಿಂದ ಸಮಸ್ಯೆ ಆಗಿದೆ ಎಂದು ಸಚಿವರು ತಿಳಿಸಿದರು.

‘ಈ ಸವಲತ್ತು ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟ ಆದೇಶ ಮಾಡಲಿ. ಇಲ್ಲವೇ ಸರ್ಕಾರವೇ ಅದಕ್ಕೆ ಅಗತ್ಯ ಅನುದಾನ ಒದಗಿಸಲಿ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಒತ್ತಾಯಿಸಿದರು.

ಸಭೆಗೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಜಿಲ್ಲಾಧಿಕಾರಿಯವರ ಅನುಮತಿ ಪಡೆಯದೇ ಗೈರಾದ ಬಗ್ಗೆ ಭೋಜೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ನೋಟಿಸ್ ಜಾರಿಗೊಳಿಸಿ ವಿವರಣೆ ಕೇಳುವಂತೆ ಸಚಿವರು ಸೂಚಿಸಿದರು.

ಸರ್ವೇಯರ್ಗಳ ಕೊರತೆಯಿಂದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ. ಹಿಂದೆ ಸಲ್ಲಿಕೆಯಾದ ಅರ್ಜಿದಾರರ ಜಮೀನಿನ ಸರ್ವೆ ನಡೆಯದೆ ಹೊಸ ಅರ್ಜಿದಾರರ ಜಮೀನಿ ಸರ್ವೆ ನಡೆಯುತ್ತಿಲ್ಲ. ಜಮೀನು ನೋಂದಣಿ ಪ್ರಕ್ರಿಯೆಗೂ ಹಿನ್ನಡೆ ಆಗುತ್ತಿದೆ ಎಂದು ಸದಸ್ಯರು ದೂರಿದರು. ಈ ಸಮಸ್ಯೆ ನೀಗಿಸಲು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಭೂಸರ್ವೇಕ್ಷಣ ಇಲಾಖೆಯ ಅಧಿಕಾರಿ ತಿಳಿಸಿದರು.

ಫಲಿಮಾರು– ಬಳ್ಕುಂಜೆ ಸೇತುವೆ ಶಿಥಿಲಗೊಂಡಿದ್ದು, ಇದರಲ್ಲಿ ವಾಹನ ಸಂಚಾರ ನಿಷೇಧಿಲಾಗಿದೆ. ಉಭಯ ಜಿಲ್ಲೆಯ ಸಂಪರ್ಕ ಕಡಿತಗೊಂಡಿದೆ. ಸೇತುವೆ ದುರಸ್ತಿ ಅಸಾಧ್ಯ. ಹೊಸ ಸೇತುವೆಗೆ ಅನುದಾನವನ್ನೂ ನೀಡುತ್ತಿಲ್ಲ ಎಂದು ಉಮಾನಾಥ ಕೋಟ್ಯಾನ್ ದೂರಿದರು. ಜಿಲ್ಲೆಯಲ್ಲಿ ತುರ್ತಾಗಿ ಆಗಬೇಕಾದ ಕಾಮಗಾರಿಗಳ ಪಟ್ಟಿ ತಯಾರಿಸಿ. ಲೋಕೋಪಯೋಗಿ ಸಚಿವರ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಬ್ರಿಟಿಷರ ನಂತರ ಸಮರ್ಪಕವಾಗಿ ಸರ್ವೆ ನಡೆದಿಲ್ಲ. ಹಾಗಾಗಿ ಪ್ರಾಯೋಗಿಕವಾಗಿ ಸಮಗ್ರ ಸರ್ವೆನಡೆಸ ಬೇಕು ಎಂದು ಪ್ರತಾಪಸಿಂಹ ನಾಯಕ್ ಒತ್ತಾಯಿಸಿದರು.

ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶ್ರೀದುರ್ಗಾ ಚಾರಿಟಬಲ್ ಟ್ರಸ್ಟ್ ದತ್ತುಪಡೆದುಕೊಂಡು ಅಭಿವೃದ್ಧಿಪಡಿಸಿದೆ. ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 32ರಷ್ಟಿದ್ದುದು ಸಾವಿರದ ಗಡಿ ದಾಟಿದೆ. ಅವ್ಯವಹಾರ ನಡೆದಿದೆ ಎಂದು ಯಾರೋ ದೂರು ನೀಡಿದ್ದಕ್ಕೆ ಶಾಲೆಯ ದತ್ತು ಮಾನ್ಯತೆ ಮುಂದುರಿಸದೇ ಇದ್ದರೆ, ಇನ್ನು ಯಾರೂ ಸರ್ಕಾರಿ ಶಾಲೆ ದತ್ತು ಪಡೆಯಲು ಮುಂದೆ ಬರುವುದಿಲ್ಲ’ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಕೋರಿದರು.

‘ಶಾಲೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಬಂದಿದ್ದರಿಂದ ದತ್ತು ಯೋಜನೆ ನವೀಕರಣಗೊಂಡಿಲ್ಲ. ಈ ಕುರಿತು ಪ್ರಾಥಮಿಕ ಶಿಕ್ಷಣ ಇಲಾಖೆಯ ವಿಭಾಗೀಯ ಕಾರ್ಯದರ್ಶಿಯವರು ವಿಚಾರಣೆ ನಡೆಸಿದ್ದಾರೆ. ಅವರ ವರದಿ ಬಂದ ಬಳಿಕ ಕ್ರಮವಹಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ಎಮ್ಮೆಕೆರೆ ಈಜುಕೊಳದ ಸೌಲಭ್ಯ ಬಳಕೆ ಬಗ್ಗೆ ಈಜು ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯ ಕುರಿತು ಸಭೆ ನಡೆಸಿ ಚರ್ಚಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಕೆಡಿಪಿ: ಚರ್ಚೆಯಾದ ಪ್ರಮುಖ ವಿಚಾರಗಳು ಅಕೇಶಿಯಾ ಗಿಡ ಬುಡಸಮೇತ ಕೀಳಲು ಭೋಜೇಗೌಡ ಸಲಹೆ ವಾಲಿಬಾಲ್ ಕೋಚ್ ನೇಮಕಕ್ಕೆ ಕ್ರಮವಹಿಸಿ– ಸಚಿವ ಸೂಚನೆ ಕೊಲೆಯಾದ ಶರತ್ ಮಡಿವಾಳ ಚಿಕಿತ್ಸೆ ಬಿಲ್ ಬಾಕಿ: ರಾಜೇಶ್ ನಾಯ್ಕ್ ಜಲಸಿರಿ ಯೋಜನೆ ಕಾಮಗಾರಿ–2025ರ ನವೆಂಬರ್ ಗಡುವು ಕಿಂಡಿ ಅಣೆಕಟ್ಟೆ ನಿರ್ವಹಣೆ– ಸಾಲುತ್ತಿಲ್ಲ ಅನುದಾನ ತುಂಬೆ ಜಲಾಶಯ: ಆಸುಪಾಸಿನ ಗ್ರಾಮಗಳಿಗೆ ನೀರು ಹರಿಸಲು ಸೂಚನೆ ಮೂಲ್ಕಿ ಪ್ರಜಾಸೌಧ ಪೂರ್ಣಗೊಳಿಸಲು ₹ 1.40 ಕೋಟಿಗೆ ಬೇಡಿಕೆ ಕೊಯಿಲ ಪಶುವೈದ್ಯಕೀಯ ಕಾಲೇಜು ಆರಂಭಿಸಿ: ಪ್ರತಾಪ ಸಿಂಹ ನಾಯಕ್ ಹಳದಿ ರೋಗ ಎಲೆಚುಕ್ಕಿ ರೋಗಕ್ಕೆ ಸಮಗ್ರ ಪ್ಯಾಕೇಜ್ಗೆ ಆಗ್ರಹ ಕಾಡುಪ್ರಾಣಿ ಹಾವಳಿ– ಆನೆ ಶಿಬಿರ ಆರಂಭಿಸಲು ಸಲಹೆ ಜಲಾಶಯಗಳ ಬಳಿ ಹಸಿರು ಮೇವು ಬೆಳೆಸಲು ಸಲಹೆ ಬೆಳ್ತಂಗಡಿ ಆಸ್ಪತ್ರೆ: ಡಯಾಲಿಸಿಸ್ ಕೇಂದ್ರ ಶವಾಗಾರ ಸ್ಥಾಪಿಸಿ– ಪೂಂಜ

‘ಪಿ.ಯು. ಉಪನ್ಯಾಸಕರ ನಿಯೋಜನೆ ಬೇಡ’ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರನ್ನು ನಿಯೋಜನೆ ಮಾಡುವ ಪರಿಪಾಟ ಕೈಬಿಡುವಂತೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಒತ್ತಾಯಿಸಿದರು. ‘ಪ್ರತಿ ಪಿ.ಯು. ಕಾಲೇಜಿಗೆ ಅಗತ್ಯ ಬಿದ್ದರೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತೇವೆ. ವಾರಕ್ಕೆ 10 ಗಂಟೆ ಅವಧಿಗಿಂತಲೂ ಕಡಿಮೆ ಕರ್ತವ್ಯ ನಿರ್ವಹಿಸಲು ಮಾತ್ರ ಅವಕಾಶ ಇರುವ ಉಪನ್ಯಾಸಕರನ್ನು ಮಾತ್ರ ಸಮೀಪದ ಕಾಲೇಜುಗಳಿಗೆ ನಿಯೋಜನೆ ಮಾಡುತ್ತೇವೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದರು. ‘ಉಪನ್ಯಾಸಕರನ್ನು ನಿಯೋಜನೆ ಮಾಡುವುದಾದರೆ ಆಯಾ ತಾಲ್ಲೂಕಿನ ಪಿ.ಯು ಕಾಲೇಜುಗಳಿಗೆ ಮಾತ್ರ ಮಾಡಬೇಕು’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

- ‘ಕೆಳರಾಯಿ:ವಿಷಪ್ರಾಶನದಿಂದ ಪಶುಗಳು ಸತ್ತಿಲ್ಲ’ ಕಳರಾಯಿಯಲ್ಲಿ ಒಂದೇ ಮನೆಯ ಮೂರು ದನ ಹಾಗೂ ನಾಲ್ಕು ಎತ್ತುಗಳು ಸತ್ತಿರುವ ಕುರಿತು ಪ್ರತಿಕ್ರಿಯಿಸಿದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಶೆಟ್ಟಿ ‘ಇವುಗಳಿಗೆ ಯಾವುದೇ ವಿಷ ಪ್ರಾಶನವಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿಲ್ಲ. ಶಿಲೀಂಧ್ರಯುಕ್ತ ಆಹಾರ ಸೇವನೆಯಿಂದಾಗಿ ಇವು ಸತ್ತಿರಬಹುದು’ ಎಂದು ತಿಳಿಸಿದರು. ಈ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ಸಚಿವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.