ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಗುರುತೇಜ್ ಶೆಟ್ಟಿ, ‘ರಾನಿ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಕೌಟುಂಬಿಕ ಮನರಂಜನಾ ಚಿತ್ರ. ಸಿನಿಮಾದಲ್ಲಿ ಮೂವರು ನಾಯಕಿಯರಿದ್ದಾರೆ. ಕರಾವಳಿ ಭಾಗದ ತಂತ್ರಜ್ಞರೇ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಈ ಊರಿನವರೇ ಆದ ಮಣಿಕಾಂತ ಕದ್ರಿ ಸಂಗೀತ ನೀಡಿದ್ದಾರೆ. ನಿರ್ಮಾಪಕರಾದ ಚಂದ್ರಕಾಂತ ಪೂಜಾರಿ ಹಾಗೂ ಉಮೇಶ್ ಹೆಗ್ಡೆಯವರೂ ಕರಾವಳಿಯವರು. ಕರಾವಳಿಯ ಪ್ರೇಕ್ಷಕರು ಈ ಸಿನಿಮಾವನ್ನು ಗೆಲ್ಲಿಸಬೇಕು’ ಎಂದರು.