ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳ್ತಂಗಡಿ ರಬ್ಬರ್ ಸೊಸೈಟಿ: ₹ 25.82 ಲಕ್ಷ ಲಾಭ

Published 22 ಆಗಸ್ಟ್ 2024, 14:24 IST
Last Updated 22 ಆಗಸ್ಟ್ 2024, 14:24 IST
ಅಕ್ಷರ ಗಾತ್ರ

ಉಜಿರೆ: ಬೆಳ್ತಂಗಡಿ ತಾಲ್ಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ₹ 252.35 ಕೋಟಿ ವ್ಯವಹಾರ ನಡೆಸಿ ₹ 25.82 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.

ಗುರುವಾರ ಉಜಿರೆಯಲ್ಲಿ ಮಹಾಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಹಕಾರ ಸಂಘದಲ್ಲಿ 3955 ಸದಸ್ಯರಿದ್ದು, ₹19.79 ಕೋಟಿ ಠೇವಣೆ ಇದೆ. ಸದಸ್ಯರಿಗೆ ಶೇ 10 ಲಾಭಾಂಶ ನೀಡಲಾಗಿದೆ. ರಾಜ್ಯದಲ್ಲೆಡೆ 33 ಖರೀದಿ ಕೇಂದ್ರಗಳಿವೆ. ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿರುವ ರಬ್ಬರ್ ನರ್ಸರಿ ಮೂಲಕ 6,898 ತೊಟ್ಟೆ ಗಿಡಗಳನ್ನು ಮಾರಾಟ ಮಾಡಲಾಗಿದೆ ಎಂದರು.

ರಬ್ಬರ್‌ಗೆ ಜಾಗತಿಕ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇರುವುದರಿಂದ ಯಾರೂ ರಬ್ಬರ್ ಗಿಡಗಳನ್ನು ಕಡಿಯಬಾರದು ಎಂದು ಅವರು ಸಲಹೆ ನೀಡಿದರು.

ಬಂಬೂ ಸೊಸೈಟಿ ಆಫ್ ಇಂಡಿಯ ಪ್ರಾಯೋಜಕತ್ವದಲ್ಲಿ ರಬ್ಬರ್ ಸೊಸೈಟಿ ಸಹಭಾಗಿತ್ವದಲ್ಲಿ ಸದಸ್ಯರಿಗೆ 5 ಸಾವಿರ ಬಿದಿರಿನ ಗಿಡಗಳನ್ನು ಈಗಾಗಲೇ ಉಚಿತವಾಗಿ ವಿತರಿಸಿದ್ದು, ಇನ್ನೂ 10 ಸಾವಿರ ಬಿದಿರಿನ ಗಿಡಗಳನ್ನು ವಿತರಿಸಲಾಗುವುದು ಎಂದು ಶ್ರೀಧರ ಜಿ.ಭಿಡೆ ತಿಳಿಸಿದರು.

ಸಿ.ಇ.ಒ. ರಾಜಶೆಟ್ಟಿ, ಉಪಾಧ್ಯಕ್ಷ ಅನಂತ ಭಟ್, ನಿರ್ದೇಶಕರಾದ ಸುಂದರ ಗೌಡ, ಪದ್ಮಗೌಡ, ಬಾಲಕೃಷ್ಣ ಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT