ಮಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ 2021-22ನೇ ಶೈಕ್ಷಣಿಕ ವರ್ಷದ 45ನೇ ಸರಣಿಯ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದಡಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ಎರಡು ಪ್ರಾಜೆಕ್ಟ್ಗಳು ‘ಅತ್ಯುತ್ತಮ ಯೋಜನೆ’ ಬಹುಮಾನ ಪಡೆದಿವೆ.

ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಥಮ್ ಕೆ.ಬಿ, ಶ್ರೀನಿಧಿ ಐ.ಎಸ್, ರೇನಾಲ್ ಮೆನೆಜಸ್ ಮತ್ತು ರಾಜಮೋಹನ್ ಕಾಮತ್ ಅವರು ಪ್ರೊ. ಅಜಿತ್ ಬಿ. ಎಸ್ ಮತ್ತು ಪ್ರೊ. ಚಂದ್ರ ಸಿಂಗ್ ಮಾರ್ಗದರ್ಶನದಲ್ಲಿ ತಯಾರಿಸಿದ ಅಡಿಕೆ ಮತ್ತು ಕಾಳುಮೆಣಸು ತೋಟಗಳಿಗೆ ಸ್ವಯಂಪ್ರೇರಿತ ಕೀಟನಾಶಕ ಸಿಂಪಡಿಸುವಿಕೆ ಮತ್ತು ರೋಗ ಪತ್ತೆ ಯುಎವಿ ವೇದಿಕೆ ಯೋಜನೆಗೆ ಪ್ರಶಸ್ತಿ ದೊರಕಿದೆ. ವಿದ್ಯಾರ್ಥಿಗಳಾದ ಸುಹಾನ್ ಆಚಾರ್ಯ, ಅಭಿಷೇಕ್ ಎಸ್ ಮಲ್ಯ, ಎನ್. ರಾಹುಲ್ ರಾವ್ ಮತ್ತು ಸ್ವಸ್ತಿಕ್ ಶೆಟ್ಟಿ ಅವರು ಪ್ರೊ. ರಿತೇಶ್ ಪಕ್ಕಳ ಪಿ ಮಾರ್ಗದರ್ಶನದಲ್ಲಿ ತಯಾರಿಸಿದ ವಾಹನದ ಕಂಪನ ಮತ್ತು ಶಬ್ದದ ಆಧಾರದ ಮೇಲೆ ರಸ್ತೆ ಸುರಕ್ಷತೆಯ ವಿಶ್ಲೇಷಣೆಯ ಆಳವಾದ ಕಲಿಕೆಯ ತಂತ್ರವನ್ನು ಬಳಸುವ ಯೋಜನೆಗೆ ಇನ್ನೊಂದು ಪ್ರಶಸ್ತಿ ದೊರಕಿದೆ.

54 ವಿಶಿಷ್ಟ ಉಪಕ್ರಮಗಳನ್ನು ಹೊಂದಿರುವ ಸಹ್ಯಾದ್ರಿಯು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಕಲಿಯುವಂತೆ ಮಾಡುತ್ತದೆ ಮತ್ತು ನಾಯಕತ್ವದ ಗುಣವನ್ನು ಅಭಿವೃದ್ಧಿಪಡಿಸುತ್ತದೆ. ಈ ಚಟುವಟಿಕೆಗಳು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಇನ್ನೋವೇಷನ್ ಸೆಲ್ನಿಂದ ನಾಲ್ಕು ಗೋಲ್ಡನ್ ಸ್ಟಾರ್ಗಳನ್ನು ಪಡೆದುಕೊಂಡಿವೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.