ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹ್ಯಾದ್ರಿ ವಿಜ್‌–ಕ್ವಿಜ್ 2020’ ಗ್ರಾಂಡ್ ಫಿನಾಲೆ ಮಾರ್ಚ್ 6ರಂದು

Last Updated 4 ಮಾರ್ಚ್ 2020, 12:43 IST
ಅಕ್ಷರ ಗಾತ್ರ

ಮಂಗಳೂರು: ಸಹ್ಯಾದ್ರಿ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನ ಎಂಬಿಎ ವಿಭಾಗದ ‘ಸಹ್ಯಾದ್ರಿ ವಿಜ್‌–ಕ್ವಿಜ್ 2020’ ಗ್ರಾಂಡ್ ಫಿನಾಲೆಯನ್ನು ಇದೇ 6 ರಂದು ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಂಬಿಎ ವಿಭಾಗದ ನಿರ್ದೇಶಕ ಡಾ.ವಿಶಾಲ್‌ ಸಮರ್ಥ, ‘ಪದವಿ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜಗತ್ತಿನ ಜ್ಞಾನವನ್ನು ರೂಪಿಸುವ ಉದ್ದೇಶದಿಂದ ಆರಂಭವಾದ ಈ ಸಹ್ಯಾದ್ರಿ ವಿಜ್‌–ಕ್ವಿಜ್, ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದೊಂದಿಗೆ, ವ್ಯವಹಾರ ಜಗತ್ತು, ಮಾರುಕಟ್ಟೆ, ಮಾನವ ಸಂಪನ್ಮೂಲ ಮತ್ತು ಹಣಕಾಸಿಗೆ ಪೂರಕವಾದ ಪರಿಜ್ಞಾನವನ್ನು ರೂಪಿಸುತ್ತದೆ’ ಎಂದರು.

ಕಾಲೇಜು ಹಂತ ಮತ್ತು ಸಹ್ಯಾದ್ರಿ ಕ್ಯಾಂಪಸ್ ಗ್ರಾಂಡ್ ಫಿನಾಲೆ ಎಂಬ ಎರಡು ಹಂತಗಳಲ್ಲಿ ವಿಜ್‌–ಕ್ವಿಜ್ ನಡೆಯುತ್ತಿದೆ. ಹಾಸನ, ಶಿವಮೊಗ್ಗ, ಕುಮಟ, ಮಂಗಳೂರು, ಉಡುಪಿ, ಕೊಡಗು, ಕಾರವಾರ ಮತ್ತು ಕಾಸರಗೋಡು ವಿಭಾಗದ ಸುಮಾರು 50 ಪದವಿ ಕಾಲೇಜುಗಳಲ್ಲಿ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಕಾಲೇಜು ಹಂತದ ವಿಜ್‌–ಕ್ವಿಜ್ ನಡೆಸಲಾಗಿದೆ. ಅಂತಿಮ ಪದವಿಯ ಮೂರು ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ತಂಡದಂತೆ, ಸುಮಾರು 9ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇವರಲ್ಲಿ ಆಯ್ಕೆಯಾದ ಸುಮಾರು 950 ವಿದ್ಯಾರ್ಥಿಗಳು ಇದೇ 6 ರಂದು ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿಪ್ರೊದ ಗ್ಲೋಬಲ್‌ ಡೆಲಿವರಿ ಆಂಡ್ ಎನೇಬಲ್‌ಮೆಂಟ್‌ನ ಮಹಾಪ್ರಬಂಧಕ ಪ್ರವೀಣ್ ಕಾಮತ್ ಕುಂಬ್ಳ, ಕಾಲೇಜಿನ ಹಳೆಯ ವಿದ್ಯಾರ್ಥಿ ಪ್ರಖ್ಯಾತ್ ಭಂಡಾರಿ ಭಾಗವಹಿಸಲಿದ್ದಾರೆ. ಎರಡು ಪ್ರಾಥಮಿಕ ಹಂತ ಮತ್ತು ಒಂದು ಅಂತಿಮ ಹಂತದಲ್ಲಿ ಗ್ರಾಂಡ್ ಫಿನಾಲೆಯಲ್ಲಿ ವಿಜೇತರು ₹25ಸಾವಿರ, ದ್ವಿತೀಯ ₹15ಸಾವಿರ ಹಾಗೂ ತೃತೀಯ ₹10ಸಾವಿರ ನಗದು ಬಹುಮಾನ ಪಡೆಯಲಿದ್ದಾರೆ ಎಂದು ಹೇಳಿದರು.

ಗ್ರಾಂಡ್ ಫಿನಾಲೆಯ ಸಮಾರೋಪ ಸಮಾರಂಭದಲ್ಲಿ ರಾಮಕೃಷ್ಣ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷ ಜಯರಾಜ್ ಬಿ. ರೈ, ಎನ್‌ಐಪಿಎಂ ಅಧ್ಯಕ್ಷ ದಿವಾಕರ್ ಕದ್ರಿ ಭಾಗವಹಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT