ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ತೆಗೆಯಲು ಕಾರ್ಯಾದೇಶ

Last Updated 5 ಏಪ್ರಿಲ್ 2022, 16:22 IST
ಅಕ್ಷರ ಗಾತ್ರ

ಮಂಗಳೂರು: ತಾಲ್ಲೂಕಿನ ಫಲ್ಗುಣಿ ನದಿ ಪಾತ್ರದ ಅದ್ಯಪಾಡಿ ಅಣೆಕಟ್ಟೆ ಹಿನ್ನೀರು ಪ್ರದೇಶ ಮತ್ತು ಬಂಟ್ವಾಳ ತಾಲ್ಲೂಕು ನೇತ್ರಾವತಿ ನದಿ ಪಾತ್ರದ ಶಂಭೂರು ಅಣೆಕಟ್ಟೆ ಹಿನ್ನೀರಿನ ಪ್ರದೇಶದಲ್ಲಿ ಹೂಳಿನೊಂದಿಗೆ ಮರಳನ್ನು ತೆಗೆಯಲು ಜಿಲ್ಲಾ ಮರಳು ಸಮಿತಿಯಿಂದ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್‌ಗೆ (ಕೆಎಸ್‌ಎಂಸಿಎಲ್) ಕಾರ್ಯಾದೇಶ ನೀಡಲಾಗಿದೆ.

ಅಣೆಕಟ್ಟೆಗಳಲ್ಲಿ ಹೂಳಿನೊಂದಿಗೆ ದೊರಕುವ ಮರಳನ್ನು ತೆಗೆದು ಸ್ಟಾಕ್‍ಯಾರ್ಡ್‍ನಲ್ಲಿ ಶೇಖರಣೆ ಮಾಡುತ್ತಿದ್ದು, ಅದ್ಯಪಾಡಿ ಮರಳು ದಾಸ್ತಾನು ಪ್ರದೇಶದಲ್ಲಿ ಸುಮಾರು 15 ಸಾವಿರ ಮೆಟ್ರಿಕ್ ಟನ್ ಮತ್ತು ಶಂಭೂರು ಮರಳು ದಾಸ್ತಾನು ಪ್ರದೇಶದಲ್ಲಿ ಅಂದಾಜು 700 ಮೆಟ್ರಿಕ್ ಟನ್ ಮರಳು ಲಭ್ಯವಿದೆ.

ಈ ಮರಳನ್ನು ಸಾರ್ವಜನಿಕರಿಗೆ, ಗ್ರಾಹಕರಿಗೆ ಖನಿಜ ಸಾಗಾಣಿಕೆ ಪರವಾನಗಿಯೊಂದಿಗೆ ವಿತರಿಸಲಾಗುವುದು. ಸಾರ್ವಜನಿಕರು, ಕಾಮಗಾರಿಗಳ ಗುತ್ತಿಗೆದಾರರು ಮರಳು ಮಿತ್ರ ಆ್ಯಪ್ ಮುಖಾಂತರ ವೆಬ್ ಸೈಟ್ https://sand.karnataka.gov.in ಅಥವಾ ಸಹಾಯವಾಣಿ ಸಂಖ್ಯೆ 080-28055000 ಮೂಲಕ ಪ್ರತಿ ಮೆಟ್ರಿಕ್ ಟನ್ ಮರಳಿಗೆ ₹700 ಹಾಗೂ ಜಿಎಸ್‌ಟಿ ಮೊತ್ತವನ್ನು
ಪಾವತಿಸಿ ಮರಳನ್ನು ಪಡೆಯಬಹುದು ಎಂದು ಜಿಲ್ಲಾ ಮರಳು ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT