ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘನಿಕೇತನ ಗಣಪನಿಗೆ ಕ್ರೈಸ್ತರಿಂದ ಪೂಜೆ

Last Updated 4 ಸೆಪ್ಟೆಂಬರ್ 2022, 4:07 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ನೇತೃತ್ವದಲ್ಲಿ ಮಂಗಳೂರು ಕ್ರೈಸ್ತ ಬಂಧುಗಳು ಶನಿವಾರ ನಗರದ ಸಂಘನಿಕೇತನ ಪ್ರತಾಪನಗರದಲ್ಲಿ 75 ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಭೇಟಿ ನೀಡಿ, ಪ್ರತಿಷ್ಠಾಪಿತ ಗಣಪನಿಗೆ ಫಲ-ಪುಷ್ಪ, ಅರ್ಪಿಸಿ ಪೂಜೆ ಸಲ್ಲಿಸಿದರು.

ಮಂಗಳೂರು ಕ್ರೈಸ್ತ ಸಭಾದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೊ ಮಾತನಾಡಿ, ‘ಸಂಘನಿಕೇತನದ ಗಣೇಶೋತ್ಸವಕ್ಕೆ ಸ್ವಾತಂತ್ರ್ಯ ಚಳವಳಿಯ ಸಂಬಂಧವಿದೆ. ಬಾಲಗಂಗಾಧರ ತಿಲಕ್ ಅವರು ಮನೆ-ಮನೆಯಲ್ಲಿ ಆಚರಿಸುತ್ತಿದ್ದ ಗಣೇಶ ಚತುರ್ಥಿಯನ್ನು ಸಮಾಜಕ್ಕೆ ತಂದು ಸಾರ್ವತ್ರಿಕವಾಗಿ ಆಚರಿಸಿ, ಸಮಾಜದಲ್ಲಿ ಸಾಮರಸ್ಯದ ಜೀವನ ನಡೆಸುವುದನ್ನು ಕಲಿಸಿಕೊಟ್ಟರು’ ಎಂದರು.

ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಸ್ಟ್ಯಾನಿ ಲೋಬೊ, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸಂಸ್ಥಾಪಕ ಫ್ರಾಂಕ್ಲಿನ್ ಮೊಂತೆರೊ, ಪ್ರಾನ್ಸಿಸ್ ಪಿಂಟೊ, ಗ್ರೆಗೋರಿ ಡಿಸಿಲ್ವ, ಅನಿಲ್ ಪತ್ರಾವೋ, ವಕೀಲೆ ವ್ಯಾನಿ ಮರಿಝಾ ಪಿಂಟೊ, ರೋಟರಿ ಜಿಲ್ಲಾ ಮಾಜಿ ಗವರ್ನರ್ ರೊನಾಲ್ಡ್ ಗೌನ್ಸ್, ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘ ಸಂಚಾಲಕ ವಿ. ನಾಗರಾಜ್, ವಿಭಾಗ ಪ್ರಚಾರಕ ಸುರೇಶ್, ಪ್ರಮುಖರಾದ ಪ್ರವೀಣ್ ಕುಮಾರ್, ಸತೀಶ್ ಪ್ರಭು, ರಘುವೀರ್ ಕಾಮತ್, ಯೋಗೀಶ್, ವಿನೋದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT