ಮಂಗಳವಾರ, ಜುಲೈ 27, 2021
20 °C

ಎಸ್‌ಸಿಡಿಸಿಸಿ ಬ್ಯಾಂಕ್: ಗ್ರಾಹಕರಿಗೆ ವಿಶೇಷ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್-19 ನಿಂದ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೆಲವೊಂದು ಯೋಜನೆಗಳನ್ನು ತನ್ನ ಗ್ರಾಹಕರಿಗೆ ರೂಪಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್, ಆಗಸ್ಟ್‌ವರೆಗೆ ಸಾಲ ಮರುಪಾವತಿಯ ಬಗ್ಗೆ ವಿನಾಯಿತಿ ಘೋಷಿಸಿದ್ದು, ಈ ಅವಧಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ ಗ್ರಾಹಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಉತ್ತಮ ಸೌಲಭ್ಯ ನೀಡಲು ಮುಂದಾಗಿದೆ. ಗ್ರಾಹಕರು ಪಡೆದ ಸಾಲಗಳ ಕಂತನ್ನು ಈ ಸಮಯದಲ್ಲಿ ಮರುಪಾವತಿಸಿದಲ್ಲಿ, ಬಡ್ಡಿದರದಲ್ಲಿ ಶೇ 2 ರಷ್ಟು ವಿನಾಯಿತಿಯನ್ನು ಬ್ಯಾಂಕ್ ನೀಡಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಿಗೆ ಹಣಕಾಸಿನ ಅವಶ್ಯಕತೆ ಇರುವುದರಿಂದ ಚಿನ್ನಾಭರಣ ಸಾಲವನ್ನು ಗ್ರಾಹಕರಿಗೆ ಕನಿಷ್ಠ ಬಡ್ಡಿದರದಲ್ಲಿ ನೀಡುತ್ತಿದೆ. ಪ್ರತಿ ಗ್ರಾಂ.ಗೆ ₹3ಸಾವಿರ ಮೌಲ್ಯವನ್ನು ತಿಂಗಳ ಬಡ್ಡಿ ಶೇ 0.8 ರ ದರದಲ್ಲಿ ನೀಡಲು ಮುಂದಾಗಿದೆ. ಗ್ರಾಹಕರು ಹೆಚ್ಚಿನ ಅವಧಿಗೆ ಠೇವಣಿ ಇಟ್ಟಲ್ಲಿ ಶೇ 0.50ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಲಾಗುವುದು. ಈ ಸೌಲಭ್ಯ ಮುಂದಿನ 3 ತಿಂಗಳ ಅವಧಿಗೆ ಮಾತ್ರ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

ಗ್ರಾಹಕರ ಹಿತವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಕೈಗೊಂಡಿರುವ ಈ ಹೊಸ ಯೋಜನೆಗಳ ಸೌಲಭ್ಯವನ್ನು ಗ್ರಾಹಕರು ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು