ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಗೆ ಹಾರಿದ ವಿಜ್ಞಾನಿ: ರಕ್ಷಣೆ

Last Updated 1 ಅಕ್ಟೋಬರ್ 2020, 19:46 IST
ಅಕ್ಷರ ಗಾತ್ರ

ಕಡಬ (ಉಪ್ಪಿನಂಗಡಿ): ಕಡಬ ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಹೊಳೆಗೆ ಹಾರಿದ್ದನ್ನು ಕಂಡ ಸಾರ್ವಜನಿಕರು, ಅವರನ್ನು ರಕ್ಷಿಸಿದ್ದಾರೆ.

ಕಡಬ ಕೆಂಚಭಟ್ರೆಯಲ್ಲಿರುವ ಭಾರತೀಯ ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿ, ತಮಿಳುನಾಡಿನ ರವಿಚಂದ್ರನ್ ಅವರು ಬುಧವಾರ ಸಂಜೆ ಬೈಕ್‌ನಲ್ಲಿ ಬಂದು, ಇಲ್ಲಿಗೆ ಸಮೀಪದ ಹೊಸ್ಮಠದಲ್ಲಿ ಹೊಳೆಗೆ ಹಾರಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅವರನ್ನು ಸಾರ್ವಜನಿಕರು ಹಾಗೂ ಇಬ್ಬರು ಲೈನ್‌ಮನ್‌ಗಳು ಸೇರಿ ರಕ್ಷಣೆ ಮಾಡಿದ್ದಾರೆ. ಕಡಬ ಎಸ್.ಐ ರುಕ್ಮ ನಾಯ್ಕ್ ಮತ್ತು ಸಿಬ್ಬಂದಿ, ಅವರನ್ನು ಸಮುದಾಯ ಆಸ್ಪತ್ರೆಗೆ ದಾಖಲಿಸಿದರು.

‘ರವಿಚಂದ್ರನ್ ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ರಬ್ಬರ್ ಸಂಶೋಧನಾ ಕೇಂದ್ರದ ವಸತಿ ಗೃಹದಲ್ಲಿ ವಾಸವಾಗಿದ್ದಾರೆ. ಹೊಳೆಗೆ ಹಾರುವ ವೇಳೆ ಅವರು ಮದ್ಯಸೇವನೆ ಮಾಡಿದ್ದರು’ ಎಂದು ಸ್ಥಳೀಯರು ತಿಳಿಸಿದ್ದಾರೆ. ‘ಹೊಳೆಗೆ ಹಾರಲು ಕಾರಣ ತಿಳಿದು ಬಂದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT