ಶನಿವಾರ, ಅಕ್ಟೋಬರ್ 1, 2022
20 °C

ಶ್ರೀಕೃಷ್ಣಾಷ್ಟಮಿ: ವ್ಯಾಪಾರ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಆ.18ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ. ಕೃಷ್ಣ ಹುಟ್ಟುವ ಹಬ್ಬದ ಆಚರಣೆಗೆ ಇಸ್ಕಾನ್, ಕೃಷ್ಣ ದೇಗುಲಗಳು ಸಜ್ಜುಗೊಂಡಿವೆ. ಮನೆಗಳಲ್ಲೂ ಕೃಷ್ಣನ ಆರಾಧನೆಗೆ ತಯಾರಿ ನಡೆದಿದೆ. 

ಕೃಷ್ಣಾಷ್ಟಮಿ ವಿಶೇಷವಾಗಿರುವ ಮೂಡೆ (ತೆಂಗಿನ ಒಲಿ) ಹಾಗೂ ಕೊಟ್ಟಿಗೆಗೆ ಬುಧವಾರ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಕಂಡುಬಂತು. ರಥಬೀದಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮೂಡೆ ಹಾಗೂ ಕೊಟ್ಟಿಗೆಗಳ ಮಾರಾಟ ಬಿರುಸಾಗಿದೆ. ಮೂಡೆಯ ಬೆಲೆ ಇತರ ದಿನಗಳಲ್ಲಿ ₹ 100ಕ್ಕೆ 8–9 ಮೂಡೆಗಳು ಲಭ್ಯವಾಗುತ್ತಿದ್ದರೆ, ಅಷ್ಟಮಿ ಸಂದರ್ಭದಲ್ಲಿ ₹ 100ಕ್ಕೆ 3–4 ಮಾತ್ರ ಸಿಗುತ್ತಿತ್ತು. ಕೊಟ್ಟಿಗೆ ₹ 100ಕ್ಕೆ ಎಂಟರಂತೆ ಮಾರಾಟವಾಯಿತು. ವಿವಿಧೆಡೆಗಳಿಂದ ಬಂದ ವ್ಯಾಪಾರಿಗಳು ಮೂಡೆ, ಕೊಟ್ಟಿಗೆ ಮಾರಾಟ ಮಾಡಿದರು. ಹೂವಿನ ವ್ಯಾಪಾರವೂ ಜೋರಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.