ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಶ್ರೀನಿವಾಸ ಸಂಸ್ಥೆಯಲ್ಲಿ ಪದವಿ ಪ್ರದಾನ

Last Updated 1 ಏಪ್ರಿಲ್ 2022, 16:28 IST
ಅಕ್ಷರ ಗಾತ್ರ

ಮಂಗಳೂರು: ಎ. ಶಾಮರಾವ್ ಪ್ರತಿಷ್ಠಾನದ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ, ಶ್ರೀನಿವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ ಆ್ಯಂಡ್ ರಿಸರ್ಚ್ ಸೆಂಟರ್ ಮತ್ತು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನ 2020ನೇ ಬ್ಯಾಚ್‍ನ ಪದವೀಧರರಿಗೆ ಶುಕ್ರವಾರ ಪದವಿ ಪ್ರದಾನ ಸಮಾರಂಭ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ಯುನಿವರ್ಸಿಟಿ ಅಧ್ಯಕ್ಷ ಡಾ. ಸಿ.ಎ.ರಾಘವೇಂದ್ರ ರಾವ್, ‘ಪದವಿ ವೃತ್ತಿ ಜೀವನಕ್ಕೆ ಅಡಿಪಾಯವಾಗಿದೆ. ಸ್ವಂತ ಕ್ಷೇತ್ರದಲ್ಲಿ ಮಿಂಚಲು ಅನುಕೂಲವಾಗಿದೆ. ನಿಮ್ಮ ಜ್ಞಾನವನ್ನು ನವೀಕರಿಸಿಕೊಂಡು, ಕಠಿಣ ಪರಿಶ್ರಮದಿಂದ ವೃತ್ತಿ ಜೀವನದಲ್ಲಿ ಯಶಸ್ವಿಯಾಗಬಹುದು’ ಎಂದರು.

ಯುನಿಕೋರ್ಟ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಾಯನ್ ಲೋಬೊ ಕಾರ್ಯಕ್ರಮ ಉದ್ಘಾಟಿಸಿದರು. ‘ಪದವೀಧರರು ಕಾರ್ಪೊರೇಟ್ ಜಗತ್ತಿನಲ್ಲಿ ಬದುಕಲು ಮತ್ತು ವೃತ್ತಿ ಜೀವನದಲ್ಲಿ ಉನ್ನತ ಮಟ್ಟವನ್ನು ಸಾಧಿಸಲು ಸಮಯಪಾಲನೆ, ಮೌಲ್ಯವನ್ನು ರೂಢಿಸಿಕೊಳ್ಳಬೇಕು’ ಎಂದರು.

ಶ್ರೀನಿವಾಸ್ ಯುನಿವರ್ಸಿಟಿ ಉಪ ಕುಲಪತಿ ಡಾ. ಎ. ಶ್ರೀನಿವಾಸ್ ರಾವ್ ಇದ್ದರು. ಎ. ಶಾಮರಾವ್ ಫೌಂಡೇಶನ್ ಕಾರ್ಯದರ್ಶಿ ಪ್ರೊ.ಮಿತ್ರ ಎಸ್. ರಾವ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ಶ್ರೀನಿವಾಸ್ ಮಯ್ಯ ಡಿ., ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿಪ್ರಾಂಶುಪಾಲ ಡಾ. ಎ.ಆರ್. ಶಬರಾಯ, ‌ಶ್ರೀನಿವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ ಅಂಡ್ ರಿಸರ್ಚ್ ಸೆಂಟರ್ ಪ್ರಾಂಶುಪಾಲ ಡಾ.ರಾಜಶೇಖರ್, ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಪ್ರಾಂಶುಪಾಲ ಪ್ಲೋರಿನ್ ಕ್ಲಾರ ಫರ್ನಾಂಡಿಸ್ ಇದ್ದರು. ಪ್ರೊ. ಅಂಬಿಕಾ ಮಲ್ಯ ಮತ್ತು ಶುಭಂ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT