ಭಾನುವಾರ, ಜನವರಿ 17, 2021
17 °C

ಎ.ಜೆ. ಆಸ್ಪತ್ರೆಯಲ್ಲಿ ಸಿಮ್ಯುಲೇಶನ್ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೌಶಲ್ಯ ಮತ್ತು ಸಿಮ್ಯುಲೇಶನ್ ಕೇಂದ್ರದಲ್ಲಿ ಇರುವ ಸುಧಾರಿತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಕೌಶಲಗಳು ವೈದ್ಯಕೀಯ ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಪ್ರಯೋಜನ ನೀಡಲಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.

ಎ.ಜೆ. ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೌಶಲ್ಯ ಮತ್ತು ಸಿಮ್ಯುಲೇಶನ್ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದ ಸ್ಥಾಪನೆಗಾಗಿ ಮಾಡಿರುವ ಪರಿಶ್ರಮವನ್ನು ಶ್ಲಾಘಿಸಿದ ಅವರು, ಕೋವಿಡ್‌–19 ನಿಭಾಯಿಸಲು ವೈದ್ಯಕೀಯ ವೃತ್ತಿಪರರ ಕೊಡುಗೆಯನ್ನು ಸ್ಮರಿಸಿದರು.

ಈಗಿನ ರಾಷ್ಟ್ರೀಯ ವೈದ್ಯಕೀಯ ಮಂಡಳಿಯು, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಉಸಿರಾಟ, ರಕ್ತಸ್ರಾವ ಮತ್ತು ಸ್ವಯಂಚಾಲಿತವಾಗಿ ಅಥವಾ ಕೈಯಾರೆ ಪ್ರತಿಕ್ರಿಯಿಸಬಲ್ಲ ಸುಧಾರಿತ ಮನುಷ್ಯಾಕೃತಿಗಳು ಮತ್ತು ಸಿಮ್ಯುಲೇಟರ್‌ಗಳಿಗೆ ಸುಧಾರಿತ ಕೌಶಲ ಮತ್ತು ಸಿಮ್ಯುಲೇಶನ್ ಕೇಂದ್ರವನ್ನು ಕಡ್ಡಾಯಗೊಳಿಸಿದೆ.

ಕೌಶಲ ಮತ್ತು ಸಿಮ್ಯುಲೇಶನ್ ಕೇಂದ್ರವು ಲ್ಯಾಪ್ರೊಸ್ಕೋಪಿ, ಆರ್ತ್ರೋಸ್ಕೊಪಿ, ಎಂಡೋಸ್ಕೋಪಿ, ಕೊಲೊನೋಸ್ಕೋಪಿ, ಬ್ರಾಂಕೋಸ್ಕೋಪಿ, ಮೂತ್ರಕೋಶ ವಿಜ್ಞಾನದ ಕಾರ್ಯವಿಧಾನಗಳು ಮತ್ತು ಸುಧಾರಿತ ಇಮೇಜಿಂಗ್ ವಿಧಾನಗಳಲ್ಲಿ ಸುಧಾರಿತ ತರಬೇತಿಗಾಗಿ ಅವಕಾಶಗಳನ್ನು ಹೊಂದಿದೆ.

ಕೌಶಲ ಮತ್ತು ಸಿಮ್ಯುಲೇಶನ್ ಸೌಲಭ್ಯವು, ಸಂಕೀರ್ಣ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ಸನ್ನಿವೇಶವನ್ನು ಕಲಿಯಲು ಮಕ್ಕಳ ಮತ್ತು ಆಪರೇಷನ್ ಥಿಯೇಟರ್ ಮಾಡ್ಯೂಲ್‌ಗಳನ್ನು ಹೊಂದಿದೆ.

ಎ.ಜೆ. ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ನಿರ್ದೇಶಕರಾದ ಡಾ.ಪ್ರಶಾಂತ್ ಮಾರ್ಲಾ, ಡಾ. ಅಮಿತಾ ಮಾರ್ಲಾ, ಕಾಲೇಜಿನ ಡೀನ್ ಡಾ.ಅಶೋಕ್ ಹೆಗ್ಡೆ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.