11 ವಿದ್ಯಾರ್ಥಿಗಳು ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ್ದು, ಒಟ್ಟು 26 ವಿದ್ಯಾರ್ಥಿಗಳು ಶೇ 90ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ವಿವಲ್ ರಿವಾ ಡಿಸೋಜ (ಶೇ 98.4), ಕೆ. ಅಜಯ್ ಭಟ್ (ಶೇ 97.12), ಸ್ತುತಿ ನಾಯಕ್ (ಶೇ 96.8), ಸಿಮ್ರನ್ ಡಿಸೋಜ (ಶೇ 96.48), ಬೆವನ್ ಜೋಶುವಾ ಡಿಸೋಜ (ಶೇ 96.16), ಕೌಶಿಕ್ ಪಿ. ಸಾಲಿಯಾನ್ (ಶೇ 96) ಅವರು ಮೊದಲ ಆರು ಸ್ಥಾನಗಳನ್ನು ಪಡೆದಿದ್ದಾರೆ. ಒಟ್ಟು 189 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 184 ಜನರು ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.