ಶುಕ್ರವಾರ, ಅಕ್ಟೋಬರ್ 7, 2022
28 °C

ಮಂಗಳೂರು– ಸುಂದರಕಾಂಡ ಹವನ; ಶ್ರೀರಾಮ ಪಟ್ಟಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕಾಶೀಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮಿಗಳ ಚಾತು ರ್ಮಾಸ್ಯ ವ್ರತದ ಪ್ರಯುಕ್ತ ನಗರದ ವೆಂಕಟರಮಣ ದೇವಸ್ಥಾನದಲ್ಲಿ ಸುಂದರಕಾಂಡ ಹವನ ನಡೆಯಿತು. ಇದರ ಅಂಗವಾಗಿ ಶ್ರೀರಾಮ ಪಟ್ಟಾಭಿ ಷೇಕ ಆಚರಣೆ ನಡೆಯಿತು.

ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಕೋಲಾಟ, ಭರತನಾಟ್ಯ ಸೇವೆ ನಡೆದವು. ಸಂಯಮಿಂದ್ರ ತೀರ್ಥ ಸ್ವಾಮೀಜಿ ದೇವರ ಪಟ್ಟಾಭಿಷೇಕ ನೆರವೇರಿಸಿದರು. ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ. ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ, ಚಾತು ರ್ಮಾಸ ಸಮಿತಿಯ ಗೌರವ ಅಧ್ಯಕ್ಷ ಮುಂಡ್ಕುರ್ ರಾಮದಾಸ್ ಕಾಮತ್, ಬಿ. ಆರ್. ಭಟ್, ನಾಮದೇವ್ ಮಲ್ಯ, ಗಣಪತಿ ಪೈ, ಸುರೇಶ್ ಕಾಮತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.