ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರತ್ಕಲ್: ಹೆದ್ದಾರಿ ಗುಂಡಿಯಲ್ಲಿ ಬಿದ್ದ ಸ್ಕೂಟರ್ ಸವಾರನಿಂದ ವಿನೂತನ ಪ್ರತಿಭಟನೆ

Published 26 ಜೂನ್ 2024, 7:12 IST
Last Updated 26 ಜೂನ್ 2024, 7:12 IST
ಅಕ್ಷರ ಗಾತ್ರ

ಸುರತ್ಕಲ್: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರೆಬರೆ ಕಾಂಕ್ರೀಟ್ ಹಾಗೂ ಡಾಂಬರು ಹಾಕಿದ್ದು, ಭಾರಿ ಮಳೆಗೆ ಹೆದ್ದಾರಿ ಹೊಂಡಮಯವಾಗಿದೆ. ಸ್ಕೂಟರ್ ಸವಾರರೊಬ್ಬರು ಬುಧವಾರ ಬೆಳಿಗ್ಗೆ ಹೆದ್ದಾರಿಯ ಗುಂಡಿಗೆ ಬಿದ್ದು ಗಾಯಗೊಂಡರು.

ಇದರಿಂದ ಬೇಸತ್ತ ಅವರು, ತಾವು ಬಿದ್ದ ಹೊಂಡದಲ್ಲೇ ತಮ್ಮ ಸ್ಕೂಟರ್ ನಿಲ್ಲಿಸಿ, ತಾವೂ ಅದರ ಪಕ್ಕದಲ್ಲೇ ನಿಂತು ಈ ದುರವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿದರು. ಅಲ್ಲದೇ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರಿಗೂ ಗುಂಡಿಗಳ ಕುರಿತು ಎಚ್ಚರಿಸುವ ಮೂಲಕ ಗಮನ ಸೆಳೆದರು..

ಇಷ್ಟೆಲ್ಲ‌ ಆದರೂ ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಸಂಚಾರ ಪೋಲಿಸರು ದಂಡ ವಿಧಿಸುವಲ್ಲಿಯೇ ನಿರತರಾಗಿದ್ದು, ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT