ಮಂಗಳವಾರ, ಜುಲೈ 27, 2021
25 °C

ಎನ್‌ಐಟಿಕೆ: ₹ 2.5 ಲಕ್ಷ ಮೌಲ್ಯದ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸುರತ್ಕಲ್ ಎನ್‌ಐಟಿಕೆ ವತಿಯಿಂದ ₹ 2.50 ಲಕ್ಷ ಮೌಲ್ಯದ 326 ಆಹಾರ ಕಿಟ್‌ಗಳನ್ನು ಆರ್ಥಿಕ ತೊಂದರೆಯಲ್ಲಿರುವ ಕಾರ್ಮಿಕರು, ಮನೆಗೆಲಸ ಮಾಡಿ ಜೀವನ ನಡೆಸುವ ಕುಟುಂಬಗಳಿಗೆ ವಿತರಿಸಲಾಯಿತು.

ಎನ್‌ಐಟಿಕೆ ನಿರ್ದೇಶಕ ಪ್ರೊ. ಉಮಾಮಹೇಶ್ವರ ರಾವ್ ಅವರು ಭಾನುವಾರ ಕಿಟ್‌ಗಳನ್ನು ವಿತರಿಸಿದರು. ಮದ್ಯ ಹಾಗೂ ಕಾಟಿಪಳ್ಳದ ಡಾ. ಬಿ.ಆರ್‌.ಅಂಬೇಡ್ಕರ್ ಕಾಲೊನಿಯ ನಿವಾಸಿಗಳಿಗೆ ವಿತರಿಸಲು 150 ಕಿಟ್‌ಗಳನ್ನು ಮಹಾನಗರ ಪಾಲಿಕೆ ಸದಸ್ಯೆ ಶ್ವೇತಾ ಪೂಜಾರಿ ಅವರಿಗೆ ಹಸ್ತಾಂತರಿಸಲಾಯಿತು.

ಎನ್‌ಐಟಿಕೆ ಸೇವಾದಳ ಕೈಗೆತ್ತಿಕೊಂಡಿದ್ದ ಈ ಕಾರ್ಯಕ್ಕೆ ಸಂಸ್ಥೆಯ ನೌಕರರು, ಹಳೆ ವಿದ್ಯಾರ್ಥಿಗಳು ದೇಣಿಗೆ ನೀಡಿದ್ದರು. ಡೀನ್ ಪ್ರೊ. ಎಂ.ಎಸ್.ಭಟ್, ಜಂಟಿ ಕುಲಸಚಿವ ರಾಂಮೋಹನ್ ವೈ, ಗ್ರಾಹಕ ಸಹಕಾರ ಸಂಘದ ಕಾರ್ಯದರ್ಶಿ ಡಾ. ರವಿಶಂಕರ ಕೆ.ಎಸ್, ಡಾ. ವಾಸುದೇವ, ರಾಮಪ್ರಸಾದ್ ಭಟ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು