‘ವಿಡಿಯೊ ತಯಾರಿಸಿಕೊಡಲು ಸಿದ್ಧ’
ಜೀವ ರಕ್ಷಣಾ ಕಲೆಗಳಲ್ಲಿ ಈಜು ಒಂದು. ಈಜು ಕಲಿಯಲು ಆಗದವರು ನೀರಿಗೆ ಬಿದ್ದಾಗ ಸ್ವಯಂ ರಕ್ಷಣಾ ತಂತ್ರಗಳ ಬಗ್ಗೆಯಾದರೂ ಪ್ರಾಥಮಿಕ ಜ್ಞಾನ ಹೊಂದಿರಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಾರಂಭಿಸುವ ಪೂರ್ವದಲ್ಲಿ ವಿಡಿಯೊ ಪ್ರದರ್ಶಿಸಬಹುದು. ಜಿಲ್ಲಾಡಳಿತ ಅನುಮತಿ ನೀಡಿದಲ್ಲಿ ಈ ಕುರಿತು ಅರಿವು ಮೂಡಿಸುವ 2–3 ನಿಮಿಷಗಳ ಕಿರುಚಿತ್ರವನ್ನು ಉಚಿತವಾಗಿ ಮಾಡಿಕೊಡಲು ಸಿದ್ಧರಿದ್ದೇವೆ ಎನ್ನುತ್ತಾರೆ ಸೇಂಟ್ ಅಲೋಶಿಯಸ್ ಈಜುಕೊಳದ ತರಬೇತುದಾರ ಲೋಕರಾಜ್ ವಿ.ಎಸ್.