ಶುಕ್ರವಾರ, ಆಗಸ್ಟ್ 19, 2022
27 °C

ಡಾ.ಎಂ.ವಿ.ಶೆಟ್ಟಿ ಟ್ರಸ್ಟ್ ಕಾಲೇಜುಗಳ ಸ್ಥಾಪಕ ಕಾರ್ಯದರ್ಶಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಡಾ.ಎಂ.ವಿ.ಶೆಟ್ಟಿ ಟ್ರಸ್ಟ್ ಕಾಲೇಜುಗಳ ಸ್ಥಾಪಕ ಕಾರ್ಯದರ್ಶಿ ಡಾ.ಎಂ.ಆರ್.ಶೆಟ್ಟಿ ಸೋಮವಾರ ನಿಧನರಾದರು.

ದಿವಂಗತ ಡಾ. ಎಂ.ವಿ.ಶೆಟ್ಟಿ ಪುತ್ರರಾದ ಡಾ. ಎಂ.ರಾಮಗೋಪಾಲ ಶೆಟ್ಟಿ ಅವರಿಗೆ ಪತ್ನಿ ಪ್ರೊ.ಹಿಮಾ ಊರ್ಮಿಳಾ ಶೆಟ್ಟಿ, ಮಕ್ಕಳಾದ ಡಾ. ದಿವ್ಯಾಂಜಲಿ ಶೆಟ್ಟಿ, ಡಾ. ರೋಹಿಲಾ ಶೆಟ್ಟಿ ಇದ್ದಾರೆ.

ಡಾ.ಎಂ.ವಿ. ಶೆಟ್ಟಿ ಟ್ರಸ್ಟ್ ಮೂಲಕ ರಾಮಗೋಪಾಲ ಶೆಟ್ಟಿ ಮಂಗಳೂರು ವಿಶ್ವ ವಿದ್ಯಾಲಯದ ಅಡಿಯಲ್ಲಿ ನರ್ಸಿಂಗ್, ಫಿಸಿಯೋಥೆರಪಿ, ವಾಕ್ ಹಾಗೂ ಶ್ರವಣ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ಹಾಗೂ ಸಾಮಾಜಿಕ ಕಾರ್ಯ ಹಾಗೂ ಶಿಕ್ಷಣ ದಂತಹ ಹಲವು ವೃತ್ತಿಪರ ಕೋರ್ಸ್ ‌ಗಳನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇವರ ಮಾರ್ಗದರ್ಶನ ಹಾಗೂ ಆಡಳಿತದ ಅಡಿಯಲ್ಲಿ ಟ್ರಸ್ಟ್ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ 15 ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳನ್ನು 8 ವಿಭಿನ್ನ ವಿಭಾಗಗಳಲ್ಲಿ ಆರಂಭಿಸಿತ್ತು.

ಡಾ.ಶೆಟ್ಟಿ ಅವರು ಮಂಗಳೂರಿನ ಸೈಂಟ್ ಅಲೋಷಿಯಸ್ ಹೈಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದು, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ತನ್ನ ಪದವಿ ಹಾಗೂ ಸ್ನಾತಕೋತ್ತರ ವೃತ್ತಿಪರ ಶಿಕ್ಷಣವನ್ನು ಪೂರೈಸಿದ್ದರು. ಬಳಿಕ ಅವರು ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡ್‌ಗೆ ತೆರಳಿದರು. ಇಂಗ್ಲೆಂಡ್‌ನಿಂದ ವಾಪಾಸಾದ ಬಳಿಕ ಕೆ.ಎಂ.ಸಿ.ಯಲ್ಲಿ ಶಸ್ತ್ರಚಿಕಿತ್ಸೆ ಯ ಸಹಾಯಕ ಪ್ರೊಫೆಸರ್ ಆದರು. 1989ರ ತನಕ ಇಲ್ಲಿಯೇ ಸೇವೆ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು