ಆಳ್ವಾಸ್‌: ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ಗೆ ಮೂವರು ಆಯ್ಕೆ 

7

ಆಳ್ವಾಸ್‌: ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ಗೆ ಮೂವರು ಆಯ್ಕೆ 

Published:
Updated:
ಪ್ರಜ್ವಲ್

ಮೂಡುಬಿದಿರೆ: ಫಿನ್ಲಂಡ್‌ನ ಟೆಂಪರ್ ಸಿಟಿಯಲ್ಲಿ ಇದೇ 10ರಿಂದ 15ರವರೆಗೆ ನಡೆಯಲಿರುವ ಐಎಎಎಫ್ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಆಳ್ವಾಸ್‌ನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಬಾಲಕರ ಶಾಟ್‌ಪಟ್‌ನಲ್ಲಿ ಆಶೀಶ್, 4x100 ಮೀಟರ್ ರಿಲೇಯಲ್ಲಿ ಪ್ರಜ್ವಲ್ ಮಂದಣ್ಣ ಹಾಗೂ ಬಾಲಕಿಯರ ವಿಭಾಗದ 4x400 ಮೀಟರ್ ರಿಲೇಯಲ್ಲಿ ಶುಭ ವಿ. ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಮೂವರು ಕ್ರೀಡಾಪಟುಗಳು ಈ ಹಿಂದೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಹಾಗೂ ಜಪಾನಿನ ಗಿಫುವಿನಲ್ಲಿ ನಡೆದ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದಿದ್ದರು.

ಇದೇ ಮೊದಲ ಬಾರಿಗೆ ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ಗೆ ಸಂಸ್ಥೆಯಿಂದ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !