ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ | ಹುಲಿ ವೇಷ ವಿವಾದ: ಚಾಕು ಇರಿತ, ಮೂವರಿಗೆ ಗಾಯ

Published 28 ಅಕ್ಟೋಬರ್ 2023, 2:54 IST
Last Updated 28 ಅಕ್ಟೋಬರ್ 2023, 2:54 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ಮೆಲ್ಕಾರ್ ಎಂಬಲ್ಲಿ ಹುಲಿ ವೇಷ ವಿವಾದಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಗುರುವಾರ ರಾತ್ರಿ ನಡೆದ ಮಾತಿನ ಚಕಮಕಿ ಮತ್ತು ಚಾಕು ಇರಿತದಿಂದ ಮೂವರು ಗಾಯಗೊಂಡಿದ್ದಾರೆ.

ಗಾಯಾಳುಗಳಾದ ಸ್ಥಳೀಯ ಬೋಳಂಗಡಿ ನಿವಾಸಿ ದೇವದಾಸ್, ಸಂದೀಪ್ ಮತ್ತು ಶಂಕರ್ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಅದೇ ಗ್ರಾಮದ ನಿವಾಸಿ ಶೋಧನ್, ಕಲ್ಲಡ್ಕ ನಿವಾಸಿ ಯತೀಶ್, ಮೆಲ್ಕಾರ್ ನಿವಾಸಿ ಚೇತನ್, ಪ್ರಸನ್ನ, ಪ್ರದೀಪ್ ಮತ್ತು ಪ್ರಕಾಶ್ ತಂಡ ಹಲ್ಲೆ ನಡೆಸಿದ ಆರೋಪಿಗಳು.

ಪಾಣೆಮಂಗಳೂರು ಎಂಬಲ್ಲಿ ಬುಧವಾರ ರಾತ್ರಿ ನಡೆದ ಶಾರದೋತ್ಸವ ಮೆರವಣಿಗೆಯಲ್ಲಿ ಹುಲಿ ವೇಷಧಾರಿಗಳ ಎರಡೂ ತಂಡಗಳ ನಡುವೆ ಪರಸ್ಪರ ಘರ್ಷಣೆ ಉಂಟಾಗಿತ್ತು ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT