ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೋಲ್‌ ರದ್ದು: ಕಾರ್ಕಳದಲ್ಲಿ ಸಂಭ್ರಮ

Published : 2 ಡಿಸೆಂಬರ್ 2022, 5:04 IST
ಫಾಲೋ ಮಾಡಿ
Comments

ಕಾರ್ಕಳ: ಬಸ್ ನಿಲ್ದಾಣ ಸಮೀಪ ಗುರುವಾರ ಸುರತ್ಕಲ್ ಟೋಲ್ ಗೇಟ್ ರದ್ದುಗೊಂಡಿರುವುದರ ಪ್ರಯುಕ್ತ ಸಂಭ್ರಮಮಾಚರಣೆ ನಡೆಯಿತು. ಸಿಹಿತಿಂಡಿ ವಿತರಣೆ ನಡೆಯಿತು.

ಪುರಸಭಾ ಸದಸ್ಯ ಶುಭದ ರಾವ್ ಮಾತನಾಡಿ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸತತ ಆರು ವರ್ಷ ನಡೆಸಿದ ಹೋರಾಟದಿಂದ ಸುರತ್ಕಲ್ ಅಕ್ರಮ ಟೋಲ್ ಗೇಟ್ ಕೊನೆಗೂ ಮುಚ್ಚಲ್ಪಟ್ಟಿದೆ. ಇದು ಒಗ್ಗಟ್ಟಿನ ಹೋರಾಟಕ್ಕೆ ಸಂದ ಗೆಲುವು. ಕಾರ್ಕಳ ಜನತೆಯ ಪರವಾಗಿ ನಾವು ಹೋರಾಟ ಸಮಿತಿಯ ಭಾಗವಾಗಿದ್ದು, ಹೋರಾಟ ನಡೆಸಿದ್ದೆವು. ಇದೀಗ ನಮ್ಮ ಸಂಭ್ರಮ ಹೆಚ್ಚಿದೆ. ಕಾರ್ಕಳದ ಟ್ಯಾಕ್ಸಿ ಚಾಲಕರು, ಬಸ್ ಏಜಂಟರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ನಿರ್ಣಾಯಕ ಹೋರಾಟದಲ್ಲಿ ಭಾಗಿಗಳಾಗಿದ್ದಾರೆ. ಅವರಿಗೂ, ಹೋರಾಟಕ್ಕೆ ಸಮರ್ಥ ನೇತೃತ್ವ ನೀಡಿದ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಗೂ, ಹೋರಾಟದಲ್ಲಿ ಭಾಗಿಗಳಾದ ಕಾರ್ಕಳದ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೂ, ಹೋರಾಟ ಸಮಿತಿಯ ಮೇಲೆ ನಂಬಿಕೆ ಇಟ್ಟು ಜೊತೆಯಾಗಿ ನಿಂತ ತುಳುನಾಡಿನ ಸಮಸ್ತ ಜನತೆ ತಮ್ಮ ಹೋರಾಟದ ಸಾಫಲಲ್ಯವನ್ನು ಸ್ವಾಗತಿಸಿದ್ದಾರೆ. ಇದು ಅವಿಭಜಿತ ಜಿಲ್ಲೆಯಲ್ಲಿ ಪರಿವರ್ತನೆಯ ಹೊಸ ಸಾಧ್ಯತೆಗಳನ್ನು ತೆರೆದಿದೆ. ಮುಂದೆಯೂ ಈ ಒಗ್ಗಟ್ಟು ಹೋರಾಟದ ಸ್ಫೂರ್ತಿಯನ್ನು ಉಳಿಸಿಕೊಳ್ಳಬೇಕು ಎಂದರು.

ಬಸ್ ಏಜೆಂಟರ ಬಳಗದ ಗೌರವಾಧ್ಯಕ್ಷ ಸುರೇಶ್ ದೇವಾಡಿಗ, ಪದಾಧಿಕಾರಿಗಳಾದ ಇಕ್ಬಾಲ್ ಅಹಮ್ಮದ್, ಬಾಲಕೃಷ್ಣ ದೇವಾಡಿಗ, ಸುಧಾಕರ್ ದೇವಾಡಿಗ, ರಾಜೇಂದ್ರ, ಪೀಚು ಪ್ರಸಾದ್, ಸತೀಶ್ ದೇವಾಡಿಗ, ಟ್ಯಾಕ್ಸಿ ಯೂನಿಯನ್ ಪದಾಧಿಕಾರಿಗಳಾದ ಮುನೀರ್, ಹೈದರ್, ತೈಯಬ್, ಲಕ್ಷ್ಮಣ ದೇವಾಡಿಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT