ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಗ್ರೇಟ್‌ ವಾಲ್‌ ಆಫ್ ಪಂಪ್‌ವೆಲ್’: ಪಂಪ್‌ವೆಲ್ ಮೇಲ್ಸೇತುವೆ ಟ್ರೋಲ್

‘ದಿ ಗ್ರೇಟ್‌ ವಾಲ್‌ ಆಫ್ ಪಂಪ್‌ವೆಲ್’ ಎಂದ ಟ್ರೋಲಿಗರು
Last Updated 4 ಜುಲೈ 2021, 14:48 IST
ಅಕ್ಷರ ಗಾತ್ರ

ಮಂಗಳೂರು: ನಗರದ ಪಂಪ್‌ವೆಲ್ ಮೇಲ್ಸೇತುವೆಗೆ ಹೆಸರನ್ನು ಗೂಗಲ್ ನಕಾಶೆಯ ಚಿತ್ರದಲ್ಲಿ ಟ್ರೋಲಿಗರು ಬದಲಾಯಿಸಿದ್ದಾರೆ.

ಮಹಾವೀರ ವೃತ್ತವು ಜನರ ಬಾಯಲ್ಲಿ ಪಂಪ್‌ವೆಲ್ ವೃತ್ತ ಎಂದಾಗಿದೆ. ಗೂಗಲ್ ನಕಾಶೆಯಲ್ಲಿ ಇಂಗ್ಲಿಷ್‌ನಲ್ಲಿ ಪಂಪ್‌ವೆಲ್ ಸರ್ಕಲ್ ಎಂದಿದ್ದರೆ, ಕನ್ನಡದಲ್ಲಿ ಮಹಾವೀರ ವೃತ್ತ ಎಂದು ತೋರಿಸುತ್ತದೆ. ಇದನ್ನು ಗಮನಿಸಿರುವ ಟ್ರೋಲಿಗರು ಪಂಪ್‌ವೆಲ್ ಮೇಲ್ಸೇತುವೆಗೆ ‘ಪಂಪ್‌ವೆಲ್ – ದಿ ಗ್ರೇಟ್‌ ವಾಲ್‌ ಆಫ್ ಪಂಪ್‌ವೆಲ್’ ಎಂದು ಬದಲಾಯಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಪಂಪ್‌ವೆಲ್ ಮೇಲ್ಸೇತುವೆ ಪಕ್ಕದಲ್ಲಿ ಇರುವ ಸರ್ವಿಸ್ ರಸ್ತೆಗೆ ‘ನಳಿನ್ ಕಟೀಲ್‌ ಸೀಸನಲ್ ಲೇಕ್’ ಎಂದು ಬರೆದಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ಸುರಿದ ಮೊದಲ ಮಳೆಗೆ ಪಂಪ್‌ವೆಲ್ ವೃತ್ತದ ಬಳಿಯ ಸರ್ವಿಸ್ ರಸ್ತೆ ಜಲಾವೃತಗೊಂಡು ಕೆರೆಯಂತಾಗಿತ್ತು. ಆ ವೇಳೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಅಲ್ಲಿ ನೀರಿನಲ್ಲಿ ಮುಳುಗಿದ ರೀತಿಯ ವಿಡಿಯೊ ಹರಿಬಿಟ್ಟು, ಟ್ರೋಲ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT