ಶನಿವಾರ, ಜನವರಿ 25, 2020
27 °C

ಗರಿಗೆದರಿದ ಕಾಸರಗೋಡು ಕಿರು ವಿಮಾನ ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಜಿಲ್ಲೆಯ ಪೆರಿಯ ಎಂಬಲ್ಲಿ ಕಿರು ವಿಮಾನ ನಿಲ್ದಾಣದ ಕನಸು ಕನಸಾಗಲಿದ್ದು,  ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸಣ್ಣ ನಗರಗಳಲ್ಲಿ ವಿಮಾನ ಸೌಕರ್ಯ ಏರ್ಪಡಿಸುವ ಅಂಗವಾಗಿ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯವು ಜಾರಿಗೊಳಿಸುತ್ತಿರುವ ಉಡಾನ್ -4 ಯೋಜನೆಯಡಿ ವಿಮಾನ ನಿಲ್ದಾಣ ಸಾಕಾರಗೊಳ್ಳಲಿದೆ.

ಪ್ರವಾಸಿ ತಾಣ ಬೇಕಲಕ್ಕೆ ಸಮೀಪದ ಪೆರಿಯ ವಿಮಾನ ನಿಲ್ದಾಣಕ್ಕೆ ಅತ್ಯಂತ ಯೋಗ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಕಾಸರಗೋಡು ಸೇರಿದಂತೆ ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲೂ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಶಿಫಾರಸು ಮಾಡಿದೆ.

ಕಾಸರಗೋಡು ನಗರದಿಂದ 23 ಕಿ.ಮೀ. ದಕ್ಷಿಣಕ್ಕಿರುವ ಪೆರಿಯ ಗ್ರಾಮದಲ್ಲಿ ವಿಮಾನ ನಿಲ್ದಾಣಕ್ಕೆ
ಈಗಾಗಲೇ 80 ಎಕರೆ ಸ್ಥಳ ಗುರುತಿಸಲಾಗಿದೆ. ಇಲ್ಲಿ 29 ಎಕರೆಯಷ್ಟು ಸರ್ಕಾರಿ ಜಾಗ ಇದ್ದು, ಉಳಿದ 51 ಎಕರೆ
ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಸ್ವಾಧೀನ ಪಡಿಸಬೇಕಾಗಿದೆ. 2016-17 ರಲ್ಲಿ ಕೊಚ್ಚಿ ವಿಮಾನ ನಿಲ್ದಾಣ ಕಂಪನಿಯಾದ 'ಸಿಯಾಲ್ ' ಪೆರಿಯ ವಿಮಾನ ನಿಲ್ದಾಣ ಕಂಪನಿ ಸ್ಥಾಪನೆ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

20 ಆಸನಗಳು ಇರುವ ವಿಮಾನಗಳು ಇಲ್ಲಿಂದ ವಿವಿಧ ಕಡೆಗಳಿಗೆ ಹಾರಾಟ ನಡೆಸಲಿದೆ. ಮಂಗಳೂರು, ಕಣ್ಣೂರು, ಕೋಝಿಕ್ಕೋಡು, ಕೊಚ್ಚಿ , ಮೈಸೂರು, ಬೆಂಗಳೂರು ಕಡೆಗಳಿಗೆ ಇಲ್ಲಿಂದ ವಿಮಾನ ಯಾನಕ್ಕೆ ಹೆಚ್ಚು ಬೇಡಿಕೆಗಳಿರಲು ಸಾಧ್ಯ ಎಂಬ ಮಾಹಿತಿ ಇದೆ.

ರಾಜ್ಯದ ಶಿಫಾರಸು ಲಭಿಸಿದ ಬಳಿಕ ಕೇಂದ್ರ ಸರ್ಕಾರವು ವಿಮಾನ ಕಂಪನಿಗಳಿಂದ ಅರ್ಜಿ  ಆಹ್ವಾನಿಸಲಿದೆ. ಕಂಪನಿಗಳಿಗೆ ನಷ್ಟದ 80 ಶೇಕಡ ಹಣವನ್ನು ಕೇಂದ್ರ ಹಾಗೂ 20 ಶೇಕಡಾ ಹಣವನ್ನು ರಾಜ್ಯ ಸರ್ಕಾರ
ಭರಿಸಿ ಕೊಡುವ ಒಪ್ಪಂದ ಉಡಾನ್ ಯೋಜನೆಯಲ್ಲಿದೆ. ವಿಮಾನ ನಿಲ್ದಾಣದ ರನ್ ವೇ ಸಹಿತ ಇತರ ಮೂಲ
ಸೌಕರ್ಯಗಳನ್ನು ಕೇಂದ್ರ ಸರ್ಕಾರ ಒದಗಿಸಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು