ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಣೂರು ಪೆರ್ಮುಡ ಸೂರ್ಯ–ಚಂದ್ರ ಜೋಡುಕರೆ ಕಂಬಳದ ಫಲಿತಾಂಶ

Last Updated 10 ಏಪ್ರಿಲ್ 2022, 14:00 IST
ಅಕ್ಷರ ಗಾತ್ರ

ಬೆಳ್ತಂಗಡಿ: ವೇಣೂರಿನ ಪೆರ್ಮುಡದಲ್ಲಿ ಶನಿವಾರ ಆರಂಭಗೊಂಡ 29ನೇ ವರ್ಷದ ಸೂರ್ಯ- ಚಂದ್ರ ಜೋಡುಕರೆ ಕಂಬಳ ಭಾನುವಾರ ಸಂಪನ್ನಗೊಂಡಿತು.

ಕನೆಹಲಗೆ ವಿಭಾಗದಲ್ಲಿ 3 ಜತೆ, ಅಡ್ಡಹಲಗೆ ವಿಭಾಗದಲ್ಲಿ 8, ಹಗ್ಗ ಹಿರಿಯ ವಿಭಾಗದಲ್ಲಿ 13, ನೇಗಿಲು ಹಿರಿಯ ವಿಭಾಗದಲ್ಲಿ 28, ಹಗ್ಗ ಕಿರಿಯ ವಿಭಾಗದಲ್ಲಿ 13, ನೇಗಿಲು ಕಿರಿಯ ವಿಭಾಗದಲ್ಲಿ 86 ಹೀಗೆ ಒಟ್ಟು 151 ಜತೆ ಕೋಣಗಳು ಭಾಗವಹಿಸಿದ್ದವು.

ಫಲಿತಾಂಶದ ವಿವಿರ:

ಕನೆಹಲಗೆ: ಪ್ರಥಮ– ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ, ಹಲಗೆ ಮುಟ್ಟಿದವರು– ಬೈಂದೂರು ಭಾಸ್ಕರ ದೇವಾಡಿಗ. ದ್ವಿತೀಯ– ಬಾರ್ಕೂರು ಶಾಂತರಾಮ್ ಶೆಟ್ಟಿ, ಹಲಗೆ ಮೆಟ್ಟಿದವರು– ಮಂದಾರ್ತಿ ಶಿರೂರು ಗೋಪಾಲ ನಾಯ್ಕ್.

ಅಡ್ಡ ಹಲಗೆ: ಪ್ರಥಮ– ಬೋಳಾರ ತ್ರಿಶಾಲ್ ಕೆ ಪೂಜಾರಿ ‘ಎ’, ಹಲಗೆ ಮುಟ್ಟಿದವರು– ಸಾವ್ಯ ಗಂಗಯ್ಯ ಪೂಜಾರಿ. ದ್ವಿತೀಯ– ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ‘ಎ’, ಹಲಗೆ ಮುಟ್ಟಿದವರು– ತೆಕ್ಕಟ್ಟೆ ಸುಧೀರ್ ದೇವಾಡಿಗ.

ಹಗ್ಗ ಹಿರಿಯ: ಪ್ರಥಮ– ಪದವು ಕಾನಡ್ಕ ಫ್ಲೇವಿ ಡಿಸೋಜ ‘ಎ’, ಓಡಿಸಿದವರು– ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ. ದ್ವಿತೀಯ– ಮಾಳ ಆನಂದ ನಿಲಯ ಶೇಖರ್ ಎ ಶೆಟ್ಟಿ ‘ಎ’, ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್‌.

ಹಗ್ಗ ಕಿರಿಯ: ಪ್ರಥಮ– ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಓಡಿಸಿದವರು– ಕೊಳಕೆ ಇರ್ವತ್ತೂರು ಆನಂದ್. ದ್ವಿತೀಯ– ಗುರುಪುರ ಕಾರಮೊಗರಗುತ್ತು ಯಶ್ ಜಗದೀಶ್ ಆಳ್ವ. ಓಡಿಸಿದವರು– ಬೈಂದೂರು ವಿವೇಕ್ ಪೂಜಾರಿ.

ನೇಗಿಲು ಹಿರಿಯ: ಪ್ರಥಮ– ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ‘ಎ’, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ. ದ್ವಿತೀಯ– ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ‘ಬಿ’, ಓಡಿಸಿದವರು– ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ: ಪ್ರಥಮ– ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ‘ಎ’, ಓಡಿಸಿದವರು– ಬೈಂದೂರು ವಿವೇಕ್ ಪೂಜಾರಿ, ದ್ವಿತೀಯ– ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ ‘ಬಿ’, ಓಡಿಸಿದವರು– ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ.

ಕಂಬಳ ಸಮಿತಿ ಅಧ್ಯಕ್ಷ ನಿತೀಶ್‌ ಕೋಟ್ಯಾನ್‌ ನೇತೃತ್ವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT