ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಣೂರು ಪೆರ್ಮುಡ: 30ನೇ ವರ್ಷದ ಸೂರ್ಯ- ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ

ಜಾನಪದ ಕ್ಷೇತ್ರಕ್ಕೆ ಕಂಬಳದ ಕೊಡುಗೆ ಅಪಾರ: ಡಾ.ಪದ್ಮಪ್ರಸಾದ್ ಅಜಿಲ
Last Updated 3 ಡಿಸೆಂಬರ್ 2022, 13:23 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಜಾನಪದ ಕ್ಷೇತ್ರಕ್ಕೆ ಕಂಬಳದ ಕೊಡುಗೆ ಅಪಾರವಾಗಿದೆ. ಕಾಂತಾರ ಸಿನೆಮಾದ ಬಳಿಕ ದೈವರಾಧನೆ ಮತ್ತು ತುಳುನಾಡಿನ ಜಾನಪದ ಆಚರಣೆಗಳಿಗೆ ಮತ್ತಷ್ಟು ಮಹತ್ವ ಬಂದಿರುವುದು ಸಂತಸದ ವಿಚಾರ’ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲರು ಹೇಳಿದರು.

ವೇಣೂರು ಪೆರ್ಮುಡದಲ್ಲಿ ನಡೆಯುತ್ತಿರುವ 30ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಎನ್. ಪುರುಷೋತ್ತಮ ರಾವ್ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಎಂ.ವಿಜಯರಾಜ ಅಧಿಕಾರಿ ಮಾರಗುತ್ತು, ಸುರೇಶ್ ಆರಿಗ ಪೆರ್ಮಾಣುಗುತ್ತು, ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾಫಿ, ಪಡಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ರಾಜಕೀರ್ತಿ ಜೈನ್ ಮೇಗಿನ ಕುಕ್ಕೇಡಿ, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಯೋಗೀಶ್ ಪೂಜಾರಿ ಬಿಕ್ರೊಟ್ಟು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ವಿನುಶಾ ಪ್ರಕಾಶ್, ಲಕ್ಷ್ಮಣ ಪೂಜಾರಿ ಹೇಡ್ಮೆ, ಭಾಸ್ಕರ ಬಲ್ಯಾಯ, ಆಶಾ ಟ್ರಾವೆಲ್ಸ್‌ನ ರಾಜೇಶ್, ರಾಜೀವ್ ಶೆಟ್ಟಿ ಎಡ್ತೂರು, ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ಗಣೇಶ್ ನಾರಾಯಣ ಪಂಡಿತ್, ನವೀನ್ ಪೂಜಾರಿ ಪಚ್ಚೇರಿ, ಕೃಷ್ಣಪ್ಪ ಪೂಜಾರಿ, ಡಾ.ಪ್ರತೀತ್ ಅಜಿಲ, ನಿಶ್ಮಿತಾ ರಾಜೇಶ್, ನಾರಾಯಣ ಪೂಜಾರಿ ಆಲಡ್ಕ, ಗ್ರಾಮ ಪಂಚಾಯಿತಿ ಸದಸ್ಯರಾದ ಗುಣವತಿ ಡಿ, ತೇಜಾಕ್ಷಿ, ವಕೀಲ ಸತೀಶ್ ಪಿ.ಎನ್., ಲೋಕೇಶ್ ಪೂಜಾರಿ ಕೋರ್ಲೋಡಿ, ಕಂಬಳ ಸಮಿತಿಯ ಉಪಾಧ್ಯಕ್ಷರಾದ ಕರುಣಾಕರ ಸಾಲ್ಯಾನ್, ಸ್ಟೀವನ್ ಮೋನಿಸ್, ಗೋಪಾಲ ಪೂಜಾರಿ, ಕೋಶಾಧ್ಯಕ್ಷ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್‌ರಾಜ್ ಪಾಪುದಡ್ಕ ಇದ್ದರು.

ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಸ್ವಾಗತಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿದರು. ಕಂಬಳ ಸಮಿತಿ ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ವಂದಿಸಿದರು.

‘ಗಂತಿನಲ್ಲಿ ಸಮಯ ವ್ಯರ್ಥ ಸಲ್ಲದು’

ಕಂಬಳದಲ್ಲಿ ಕೋಣಗಳನ್ನು ಬಿಡುವ ಗಂತಿನಲ್ಲಿ ಸಮಯ ವ್ಯರ್ಥ ಸಲ್ಲದು. ಮಂಜೊಟ್ಟಿಯಲ್ಲಿ ಸೆನ್ಸರ್ ಲೈಟ್ ಮೂಲಕ ಸ್ಪರ್ಧೆಯನ್ನು ನಿರ್ಣಾಯಕ ಮಾಡುವಂತೆ ಗಂತಿನಲ್ಲೂ ಕೋಣಗಳನ್ನು ಬಿಡಲು ಸೆನ್ಸನ್ ಲೈಟ್ ಆಗಬೇಕು ಎಂದು ಡಾ.ಪದ್ಮಪ್ರಸಾದ್ ಅಜಿಲರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT