ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಂಡಿ ಅಣೆಕಟ್ಟೆ ಜೀವ ಜಲದ ಖಜಾನೆ’

Published 10 ಜನವರಿ 2024, 8:45 IST
Last Updated 10 ಜನವರಿ 2024, 8:45 IST
ಅಕ್ಷರ ಗಾತ್ರ

ಬಜಪೆ: ಕೃಷಿ ಕಾರ್ಯಗಳಿಗೆ ಚೇತನವಾಗಿರುವ ಕಿಂಡಿ ಆಣೆಕಟ್ಟೆಗಳು ಅಂತರ್ಜಲ ಮಟ್ಟ ಏರಿಸುವುದರಿಂದ ಕುಡಿಯುವ ನೀರಿಗೂ ಸಹಕಾರಿಯಾಗಿವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಪಡುಪೆರಾರ ನಾಲದೆ ಎಂಬಲ್ಲಿ ನಳಿನಿ ಹೊಳೆಗೆ ಸುಮಾರು ₹1.40 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟೆ ಉದ್ಘಾಟನೆ ಹಾಗೂ ನಮೋ ನಳಿನಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಕೃಷಿಯತ್ತ ಆಕರ್ಷಿತರಾಗಲು ನೀರಿನ ಕೊರತೆ ನೀಗಬೇಕು. ಇಂಥ ಕಿಂಡಿ ಅಣೆಕಟ್ಟೆ ನಿರ್ಮಾಣದಿಂದ ಮತ್ರ ಇದು ಸಾಧ್ಯ. ಸ್ವಚ್ಛತೆಯ ಮೂಲಕ ಈ ಜಲನಿಧಿಯನ್ನು ಉಳಿಸಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜನಾರ್ದನ ಗೌಡ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್ ಕೋಟ್ಯಾನ್, ವಿದ್ಯಾ ಜೋಗಿ, ಶ್ರೀ ಕ್ಷೇತ್ರ ಪೆರಾರದ ಬಲವಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ, ನಾರಾಯಣ ಪೆಜತ್ತಾಯ, ಪ್ರಭಾಕರ ಪೆಜತ್ತಾಯ, ಶೇಖರ್ ಸಪಲಿಗ, ಶರತ್ ಶೆಟ್ಟಿ, ಹರಿಪ್ರಸಾದ್, ಸಚಿನ್, ವಿನ್ಸ್ಸೆಂಟ್, ಚಂದ್ರ ಪೂಜಾರಿ, ಅಣ್ಣಿ, ಆನಂದ, ಹಿತೇಶ್ ಗಾಣಿಗ ಭಾಗವಹಿಸಿದ್ದರು. ಸುನಿಲ್ ಪೆರಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT