ಶುಕ್ರವಾರ, ಮಾರ್ಚ್ 5, 2021
30 °C

‘ಸ್ಫೋಟಕ ಸಾಗಾಟ ಬಿಜೆಪಿ ಸರ್ಕಾರಕ್ಕೆ ಏಕೆ ಗೊತ್ತಾಗಲ್ಲ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಭಾರಿ ಪ್ರಮಾಣದಲ್ಲಿ ಸ್ಫೋಟಕ ಸಾಗಣೆಯಾಗುವಾಗ  ಬಿಜೆಪಿ ಸರ್ಕಾರಗಳಿಗೆ ಏಕೆ ಗೊತ್ತಾಗುವು
ದಿಲ್ಲ? ಇವುಗಳಲ್ಲಿ ಇವರ ಪಾತ್ರವೇನು?’ ಎಂದು ಶಾಸಕ ಯು.ಟಿ.ಖಾದರ್ ಶನಿವಾರ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಪುಲ್ವಾಮಾಕ್ಕೆ 200 ಕೆ.ಜಿ. ಸ್ಫೋಟಕ ಬಂದಾಗ ಅಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ಇತ್ತು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಸ್ಫೋಟ ಸಂಭವಿಸಿದೆ. ಎರಡೂ ಸಂದರ್ಭದಲ್ಲಿ ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದೆ. ಇಷ್ಟೊಂದು ಅಕ್ರಮಗಳೆಲ್ಲ ಇವರಿಗೆ ಗೊತ್ತಾಗದೇ ಇರುವ ಹಿನ್ನೆಲೆ ಏನು?’ ಎಂದು ವ್ಯಂಗ್ಯವಾಡಿದರು.

‘ಶಿವಮೊಗ್ಗದ ಸ್ಫೋಟದಿಂದ ಮೂರು ಜಿಲ್ಲೆಗಳ ವಿವಿಧೆಡೆ ಆಗಿರುವ ಹಾನಿ ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮಳೆಗಾಲ ದಲ್ಲಿ ಖಾಸಗಿ ಆಸ್ತಿಗಳೂ ಸೇರಿದಂತೆ ಸೇತುವೆ, ಅಣೆಕಟ್ಟೆ, ರೈಲ್ವೆ ಹಳಿ ಮತ್ತಿ ತರೆಡೆ ಅ‍ಪಾಯ ಸಂಭವಿಸುವ ಸಾಧ್ಯತೆ ಇದೆ. ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. 

‘ಶಿವಮೊಗ್ಗದ ಅಕ್ರಮ ಗಣಿಗಾರಿಕೆಯಲ್ಲಿ ಮುಖ್ಯಮಂತ್ರಿ ಪುತ್ರ, ಸಚಿವರಾದ ಕೆ.ಎಸ್. ಈಶ್ವರಪ್ಪ, ಮುಖಂಡ ಭಾನುಪ್ರಕಾಶ್‌ ಅವರ ಪಾತ್ರದ ಬಗ್ಗೆ ದೂರುಗಳಿದ್ದು, ಉನ್ನತ ಮಟ್ಟದ ತನಿಖೆ ಆಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು