ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಮ್ಮಗು ಆಡಿಸುತ್ತಿದ್ದ ಅಜ್ಜಿ ಟೆರೇಸ್‌ನಿಂದ ಬಿದ್ದು ಸಾವು

Published 4 ಜೂನ್ 2024, 2:33 IST
Last Updated 4 ಜೂನ್ 2024, 2:33 IST
ಅಕ್ಷರ ಗಾತ್ರ

ಮಂಗಳೂರು: ಮಳವೂರು ಗ್ರಾಮದ, ಕಲ್ಲೋಡಿಯಲ್ಲಿ ಮೊಮ್ಮಗುವನ್ನು ಆಡಿಸುತ್ತಿದ್ದ ಮಹಿಳೆಯೊಬ್ಬರು ಟೆರೇಸ್‌ನಿಂದ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.

‘ಮೃತರನ್ನು ರಾಯಚೂರು ಜಿಲ್ಲೆಯ ಬಸಮ್ಮ (53) ಎಂದು ಗುರುತಿಸಲಾಗಿದೆ. ಮಗ ಕನಕ ರೆಡ್ಡಿ–ಸೊಸೆ ಹಾಗೂ ಮೊಮ್ಮಗುವಿನ ಜೊತೆ  ಅವರು ಮಳವೂರಿನ ಡಯಾನ ಅವರ ಬೆಥೆಲ್ ಹೌಸ್‌ನಲ್ಲಿ ಬಾಡಿಗೆ ಮನೆಯಲ್ಲಿ ಮೂರು ವರ್ಷಗಳಿಂದ ವಾಸವಿದ್ದರು. ಟೆರೇಸ್‌ನಲ್ಲಿ ಬೆಳಿಗ್ಗೆ 8ರ ಸುಮಾರಿಗೆ ಮಗುವನ್ನು ಆಡಿಸುತ್ತಿದ್ದ ಬಸಮ್ಮ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು. ಗಾಐಗೊಂಡಿದ್ದ ಅವರನ್ನು ಬಜಪೆಯ ಫಾದರ್‌ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ಅವರು ಅಸುನೀಗಿದ್ದರು ಎಂದು  ಪೊಲೀಸ್ ಮೂಲಗಳು ತಿಳಿಸಿವೆ.

ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT