ಶುಕ್ರವಾರ, ಡಿಸೆಂಬರ್ 2, 2022
19 °C

ಬೆಳ್ತಂಗಡಿ | ಯಕ್ಷಗಾನ ಬಯಲಾಟ ಆಮಂತ್ರಣ ಪತ್ರಿಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ಯಕ್ಷ ಬಳಗ ಬೆಳ್ತಂಗಡಿ ಆಶ್ರಯದಲ್ಲಿ ಯಕ್ಷ ಬಳಗ ಅಳದಂಗಡಿ, ಉಜಿರೆ, ಮರೋಡಿ, ವೇಣೂರು, ತಣ್ಣಿರುಪಂತ ವಲಯ ಸಮಿತಿಗಳ ಸಹಕಾರದೊಂದಿಗೆ ಇದೇ 28ರಿಂದ ಡಿಸೆಂಬರ್ 2ರವರೆಗೆ ನಡೆಯಲಿರುವ ಗೆಜ್ಜೆಗಿರಿಯ ಶ್ರೀ ಅದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯಲ್ಲಿ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲ ಬಿಡುಗಡೆಗೊಳಿಸಿದರು.

ಯಕ್ಷ ಬಳಗ ತಾಲ್ಲೂಕು ಸಮಿತಿಯ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಅಧ್ಯಕ್ಷ ಸಂತೋಷ್ ಗೌಡ ವಳಂಬ್ರ, ಕಾರ್ಯದರ್ಶಿ ನಿತ್ಯಾನಂದ ನಾವರ, ಕೋಶಾದಿಕಾರಿ ಶೇಖರ್ ಕುಕ್ಕೆಡಿ, ಅಳದಂಗಡಿ ವಲಯ ಸಮಿತಿಯ ಗೌರವಾಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೋಡಿ ಗುತ್ತು ಗೌರವ ಸಲಹೆಗಾರ ನಾಗಕುಮಾರ್ ಜೈನ್, ವಾಸುದೇವ ರಾವ್ ಸುಲ್ಕೇರಿ, ವಿಶ್ವನಾಥ ಪೂಜಾರಿ ಕುದ್ಯಾಡಿ, ಕೊರಗಪ್ಪ ಪೂಜಾರಿ ಸುಲ್ಕೇರಿ, ರಮೇಶ್ ಎಸ್.ಎಂ, ಮರೋಡಿ ವಲಯ ಸಮಿತಿಯ ಅಧ್ಯಕ್ಷ ಮುನಿರಾಜ್ ಜೈನ್, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಉಚ್ಚೂರು, ತಣ್ಣಿರುಪಂಥ ವಲಯ ಸಮಿತಿಯ ಕಾರ್ಯಾಧ್ಯಕ್ಷ ಜಯವಿಕ್ರಮ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ವಿನುಶಾ ಪ್ರಕಾಶ್ , ಅಳದಂಗಡಿ ವಲಯ ಸಮಿತಿಯ ಕಾರ್ಯದರ್ಶಿ ವೀರೇಂದ್ರ ಕುಮಾರ್ ಜೈನ್, ಕೋಶಾಧಿಕಾರಿ ಚಂದ್ರಶೇಖರ್ ಅಳದಂಗಡಿ, ಉಪಾಧ್ಯಕ್ಷ ರವೀಂದ್ರ ಅಮೀನ್ ಬಳಂಜ, ಉಮೇಶ್ ಸುವರ್ಣ, ಸುಲೇಮಾನ್ ಶಾಫಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು