ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದಲ್ಲಿ ವಿಕಾಸ್ ಹೆಜ್ಜೆಗಾರಿಕೆ

Last Updated 5 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಯಕ್ಷಗಾನ ಕರಾವಳಿ ಗಂಡುಕಲೆ. ಕರಾವಳಿಭಾಗದ ಜನರಿಗೆ ಯಕ್ಷಗಾನದ ಮೇಲೆ ಒಲವು ಜಾಸ್ತಿ. ಯಕ್ಷಗಾನದ ಪ್ರತಿ ಪ್ರಾತಕ್ಕೆ ಜೀವ ತುಂಬುವ ಮುಖಾಂತರ, ಜನರಿಗೆ ಮನಕ್ಕೆ ತಟ್ಟುವಂತೆ ಮಾಡುವ ಪಾತ್ರಧಾರಿಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ, ಅಂತಹ ಕಲಾವಿದರಲ್ಲಿ ವಿಕಾಸ್ ಕೂಡಾ ಒಬ್ಬರು.

ಊರಿನ ದೇವಸ್ಥಾನದಲ್ಲಿ ನಾಟ್ಯ ತರಬೇತಿ ನೀಡುವುದನ್ನು ನೋಡಿ ತಾನು ಕೂಡಾ ಯಕ್ಷಗಾನ ಮಾಡಬೇಕು ಎಂದು ಅಲ್ಲಿ ಕಲಿಸುತ್ತಿರುವ ಗುರುಗಳ ಬಳಿ ತನ್ನಲ್ಲಿನ ಯಕ್ಷಗಾನದ ಒಲವಿನ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿಂದ ವಿಕಾಸ್‌ ಅವರ ಯಕ್ಷಗಾನ ಪಯಣ ಆರಂಭವಾಯಿತು. 14 ನೇ ವಯಸ್ಸಿನಲ್ಲಿ ಯಕ್ಷಗಾನದತ್ತ ಮುಖ ಮಾಡಿದರು. ಹವ್ಯಾಸಿ ಕಲಾವಿದನಾಗಿ ಕತ್ಯಾಳ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾಭವನ ಕುಡುಲು ಮೇಳದಲ್ಲಿ ಪಾತ್ರಧಾರಿ ಆಗಿ ಆರಂಭಿಕವಾಗಿ ಸೇರಿಕೊಂಡರು.

ಧರ್ಮೇಂದ್ರ ಆಚಾರ್ಯ ಬಾಯರು ಇವರ ಗುರುಗಳು. 4 ವರ್ಷಗಳ ಕಾಲ ಯಕ್ಷಗಾನ ತರಬೇತಿ ಪಡೆದರು. 54 ನೇ ಕೇರಳದ ಕಲೋತ್ಸವದಲ್ಲಿ ಇವರನ್ನು ಸೇರಿದಂತೆ ಏಳು ಜನರ ತಂಡವು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಬಾಚಿಕೊಂಡಿತು. ಇವರ ತಂಡಕ್ಕೆ ಸನ್ಮಾನವನ್ನು ಮಾಡಲಾಯಿತು. ಜತೆಗೆ ಜಿಲ್ಲಾ ಮಟ್ಟದಲ್ಲಿ ಮೈಮ್ ಶೋನಲ್ಲಿ ಭಾಗವಹಿಸಿ ಅದರಲ್ಲಿ ‘ಎ’ ಗ್ರೇಡ್ ಪಡೆದರು. ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುವಾಗ ಸ್ಕೌಟ್ಸ್‌, ಗೈಡ್ಸ್‌ನಲ್ಲಿ ರಾಜ್ಯ ಪುರಸ್ಕಾರ ಮತ್ತು ಕ್ಯಾಲಿಕಟ್‍ನಲ್ಲಿ ರಾಷ್ಟ್ರಪತಿ ಪ್ರಶಸ್ತಿ ಸಿಕ್ಕಿದೆ.

ಮೂಲತಃ ಇವರು ಕಾಸರಗೋಡು ತಾಲ್ಲೂಕಿನ ಕುಡುಲು ಗ್ರಾಮದ ಗೋಪಾಲಕೃಷ್ಣ ಕೆ. ಮತ್ತು ಸ್ವರ್ಣಲತ ಎಂ ದಂಪತಿ ಪುತ್ರ. ಇವರು ಪ್ರಸ್ತುತ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ನಲ್ಲಿದ್ವಿತೀಯ ಪದವಿ ಓದುತ್ತಿದ್ದಾರೆ. ಯಕ್ಷಗಾನದಲ್ಲಿ ಮುಂದೇ ಅವಕಾಶ ಸಿಕ್ಕರೆ ಅಭಿನಯಿಸುವ ಆಸೆ ಇದೆ. ಇವರ ಆಸಕ್ತಿ ಕ್ಷೇತ್ರ ಯಕ್ಷಗಾನಕ್ಕೆ ಮನೆಯವರ ಪ್ರೋತ್ಸಾಹ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT