ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಯೋಗದಿಂದ ಅನಾರೋಗ್ಯಕ್ಕೆ ಮುಕ್ತಿ: ಡಾ. ಪ್ರಭಾಕರ ಭಟ್ ಕಲ್ಲಡ್ಕ

‘ಯೋಗಾಯನೊ’ ಸಮಾರೋಪದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ
Last Updated 7 ಅಕ್ಟೋಬರ್ 2020, 3:15 IST
ಅಕ್ಷರ ಗಾತ್ರ

ಮಂಗಳೂರು: ‘ದೇಹದ ಸರ್ವರೋಗಗಳ ನಿಯಂತ್ರಣ, ಬುದ್ಧಿ, ನರ ಸೇರಿದಂತೆ ದೇಹದ ಎಲ್ಲ ಭಾಗಗಳಿಗೆ ಶಕ್ತಿ ಕೊಡಲು ಯೋಗದಿಂದ ಮಾತ್ರ ಸಾಧ್ಯ. ನಿರಂತರ ಯೋಗದಿಂದ ಮಾನಸಿಕ ಒತ್ತಡ ಹಾಗೂ ಅನೇಕ ಅನಾರೋಗ್ಯದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು’ ಎಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಕಾರದೊಂದಿಗೆ ಧೀ ಶಕ್ತಿ ಜ್ಞಾನ ಯೋಗ ವತಿಯಿಂದ ಹತ್ತು ದಿನಗಳ ಕಾಲ ನಗರದ ತುಳು ಅಕಾಡೆಮಿಯ ಸಿರಿಚಾವಡಿಯಲ್ಲಿ ನಡೆದ ‘ಯೋಗಾಯನೊ’ ಉಚಿತ ಧ್ಯಾನ ಯೋಗ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ವೈದ್ಯಕೀಯ ಚಿಕಿತ್ಸೆಯಿಂದ ಗುಣಪಡಿಸಲಾಗದಂತ ರೋಗಗಳನ್ನು ತಡೆಗಟ್ಟುವಂತಹ ಶಕ್ತಿ ಪ್ರಾಣಾಯಾಮಕ್ಕೆ ಇದೆ. ಕಡಿಮೆ ತಿಂದು, ಹೆಚ್ಚು ಶಕ್ತಿಶಾಲಿಯಾಗಲು ಯೋಗದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ರೋಟರಿ ಅಸಿಸ್ಟೆಂಟ್ ಗವರ್ನರ್ ಆನಂದ ಶೆಟ್ಟಿ, ಮಾಜಿ ಗವರ್ನರ್ ಡಾ.ದೇವದಾಸ್ ರೈ, ಪಾಲಿಕೆ ಸದಸ್ಯೆ ಜಯಲಕ್ಷ್ಮೀ ಶೆಟ್ಟಿ, ತುಳು ಅಕಾಡೆಮಿ ಸದಸ್ಯ ಶಶಿಧರ್ ಶೆಟ್ಟಿ, ಚೇತಕ್ ಪೂಜಾರಿ ಅತಿಥಿಗಳಾಗಿದ್ದರು.

ಯೋಗ ನಡೆಸಿಕೊಟ್ಟ ಧೀ ಶಕ್ತಿ ಜ್ಞಾನ ಯೋಗದ ಗುರೂಜಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆಗಳ ಜಿಲ್ಲಾ ಚೆಯರ್‌ಮೆನ್ ರಾಜಗೋಪಾಲ ರೈ ಸ್ವಾಗತಿಸಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಪ್ರಕಾಶ್ಚಂದ್ರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT