ಮಂಗಳೂರು: ಗ್ರಾಮ ಪಂಚಾಯಿತಿ, ಶಾಲೆ ಹಾಗೂ ಅಂಗನವಾಡಿಗಳು ತಮಗೆ ಅಗತ್ಯವಿರುವ ಇಂಧನವನ್ನು ಸ್ವತಃ ಉತ್ಪಾದಿಸಿ ಸ್ವಾವಲಂಬನೆ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ವಿನೂತನ ಯೋಜನೆ ರೂಪಿಸಿ ಮುಂದಡಿ ಇಟ್ಟಿದೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯಲ್ಲಿ ಸಾವಯವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಏಪ್ರಿಲ್ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡವ ನಿರೀಕ್ಷೆ ಇದೆ.

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ನದು ದೊಡ್ಡ ಸಮಸ್ಯೆ. ಅನಿಯಮಿತ ವಿದ್ಯುತ್ ಕಡಿತದಿಂದ ಗ್ರಾಮಸ್ಥರು ಎದುರಿಸುವ ಸಮಸ್ಯೆ ಹಲವು ಬಗೆಯದು. ಜತೆಗೆ ಗ್ರಾಮ ಪಂಚಾಯಿತಿಯ ಅನುದಾನದ ಶೇ 40 ಮೊತ್ತ ವಿದ್ಯುತ್ ಬಿಲ್ ಪಾವತಿಗೆ ತೆಗೆದಿಡಬೇಕಾದ ಸ್ಥಿತಿ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳ ಅನುದಾನಕ್ಕೆ ಕತ್ತರಿ.

ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿಯೂ ಸ್ವಾವಲಂಬಿ ಆಗಬೇಕು ಎಂದು ಯೋಜಿಸಿದ ಜಿಲ್ಲಾ ಪಂಚಾಯಿತಿ, ಆರಂಭಿಕ ಹಂತದಲ್ಲಿ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರ ಸುಬ್ರಹ್ಯಣ್ಯದಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಇಲ್ಲಿನ ಸಾಧಕ- ಬಾಧಕ, ಯಶಸ್ಸು ನೋಡಿಕೊಂಡು ಇತರೆ ಗ್ರಾಮ ಪಂಚಾಯಿತಿಗಳಿಗೂ ಯೋಜನೆ ವಿಸ್ತರಿಸುವ ಆಲೋಚನೆ ಹೊಂದಿದೆ.

`ಸುಬ್ರಹ್ಮಣ್ಯದಲ್ಲಿ ರೂ. 35 ಲಕ್ಷ ವೆಚ್ಚದಲ್ಲಿ ಈ ಸ್ವಾವಲಂಬಿ ವಿದ್ಯುತ್ ಘಟಕ ನೆಲೆಗೊಳ್ಳಲಿದೆ. ದಿನಕ್ಕೆ 300 ಕೆ.ಜಿ. ತ್ಯಾಜ್ಯ ಬಳಸಿ ವಿದುತ್ ಉತ್ಪಾದಿಸಲಿದೆ. ತ್ಯಾಜ್ಯದಿಂದ ಉತ್ಪತ್ತಿಯಾದ ಜೈವಿಕ ಅನಿಲವನ್ನು ಜನರೇಟರ್, ಕನ್ವರ್ಟರ್ ಮೂಲಕ ವಿದ್ಯುತ್ ಆಗಿ ಪರಿವರ್ತಿಸಲಾಗುತ್ತದೆ. ದಿನಕ್ಕೆ 15 ಕೆ.ವಿ. ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್ `ಪ್ರಜಾವಾಣಿ~ಗೆ ಭಾನುವಾರ ತಿಳಿಸಿದರು.

`ಗ್ರಾಮದ ನಾಲ್ಕು ಪ್ರಮುಖ ರಸ್ತೆಗಳ 150 ಬೀದಿದೀಪಗಳನ್ನು ಈ ಜೈವಿಕ ವಿದ್ಯುತ್ನಿಂದ ಬೆಳಗಿಸಬಹುದು. ಹಗಲು ಹೊತ್ತಿನಲ್ಲಿ ನೀರಾವರಿ ಪಂಪ್ಸೆಟ್ಗಳಿಗೆ ಈ ವಿದ್ಯುತ್ ಬಳಸುವ ಉದ್ದೇಶವಿದೆ. ಬಳಿಕ ಉಳಿದ ಸ್ಲರಿಯನ್ನು ಉತ್ತಮ ಗೊಬ್ಬರವನ್ನಾಗಿ ಪರಿವರ್ತಿಸಲಾಗುವುದು~ ಎಂದು ಅವರು ವಿವರಿಸಿದರು.

`ಈಗ ಗ್ರಾಮ ಪಂಚಾಯಿತಿ ಅನುದಾನದ ಹೆಚ್ಚಿನ ಮೊತ್ತ ವಿದ್ಯುತ್ ಬಿಲ್ ಪಾವತಿ ಹಾಗೂ ಸಿಬ್ಬಂದಿ ವೇತನ ಪಾವತಿಗೆ ವ್ಯಯವಾಗುತ್ತಿದೆ. ಘಟಕ ಪ್ರಾರಂಭವಾದ ಐದು ವರ್ಷಗಳಲ್ಲೇ ರೂ. 35 ಲಕ್ಷ ವಾಪಸ್ ಬರುವ ನಿರೀಕ್ಷೆ ಇದೆ. ಶಿಕ್ಷಣ, ಆರೋಗ್ಯ, ನೈರ್ಮಲ್ಯದ ಜತೆಗೆ ಗ್ರಾಮಗಳು ವಿದ್ಯುತ್ನಲ್ಲಿ ಸ್ವಾವಲಂಬನೆ ಸಾಧಿಸುವಂತಾಗಬೇಕು~ ಎಂದು ತಿಳಿಸಿದರು.

`ಈ ಘಟಕಕ್ಕೆ ಗ್ರಾಮ ಪಂಚಾಯಿತಿ ಅನುದಾನ, ನಿರ್ಮಲ ಗ್ರಾಮ ಪುರಸ್ಕಾರದಿಂದ ಬರುವ ಮೊತ್ತದ ಒಂದು ಭಾಗ ವಿನಿಯೋಗಿಸಲಾಗುವುದು. ಕೇಂದ್ರ ಸರ್ಕಾರದ ಅಸಂಪ್ರದಾಯಿಕ ಶಕ್ತಿ ಮೂಲಗಳ ಇಲಾಖೆ ಸಬ್ಸಿಡಿ ನೀಡುತ್ತದೆ. ವರ್ಷಕ್ಕೆ ಸುಬ್ರಹ್ಮಣ್ಯಕ್ಕೆ 10 ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ. ಜಿಲ್ಲಾಧಿಕಾರಿ ಇದನ್ನು ದೃಢೀಕರಿಸಿದರೆ ಈ ಇಲಾಖೆಯಿಂದ ರೂ. 15 ಲಕ್ಷ ಅನುದಾನ ಸಿಗಲಿದೆ. ಡಿಸಿ ದೃಢೀಕರಣ ಕೆಲವೇ ದಿನಗಳಲ್ಲಿ ಸಿಗಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಸುಬ್ರಹ್ಮಣ್ಯ ದೇವಳದ ಸಮೀಪದಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಘಟಕದ ಕಟ್ಟಡ ನಿರ್ಮಾಣವಾಗುತ್ತಿದೆ. ಏಪ್ರಿಲ್ ಆರಂಭದಲ್ಲಿ ಘಟಕ ಉದ್ಘಾಟಿಸಲಾಗುವುದು. ಗ್ರಾಮ ಪಂಚಾಯಿತಿಗೆ ಬರುವ ವಾರ್ಷಿಕ ಅನುದಾನ ರೂ. 8 ಲಕ್ಷ. ಇದರಲ್ಲಿ ಶೇ. 40ರಷ್ಟು ಕರೆಂಟ್ ಬಿಲ್ಗೆ ಹೋಗುತ್ತಿದೆ. ಈ ಘಟಕ ನಿರ್ಮಾಣವಾದ ಬಳಿಕ ವಿದ್ಯುತ್ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿಯಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ.

ಈ ಘಟಕ ನಿರ್ಮಾಣದಿಂದ 12 ಮಂದಿಗೆ ಉದ್ಯೋಗವೂ ದೊರೆಯಲಿದೆ. ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರ ತ್ಯಾಜ್ಯಗಳನ್ನು ಬೇರ್ಪಡಿಸಲಾಗುತ್ತದೆ. ಗ್ರಾಮವನ್ನು ಬಾಟಲಿ, ಪ್ಲಾಸ್ಟಿಕ್ಮುಕ್ತ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಇದೆ~ ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ಪೂಜಾರಿ ಪ್ರಜಾವಾಣಿಗೆ ತಿಳಿಸಿದರು.

ತ್ಯಾಜ್ಯದಿಂದ ಅಡುಗೆ ಅನಿಲ!

ಮಂಗಳೂರು ತಾಲ್ಲೂಕಿನ ಬಜ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ (ಬಿಸಿಎಂ) ಹಾಸ್ಟೆಲ್ನಲ್ಲಿ ಅಡುಗೆಗೆ ಬೇಕಾದ ಅಗತ್ಯ ಅಡುಗೆ ಅನಿಲ ಪೂರೈಕೆ ಆಗುತ್ತಿರುವುದು ತ್ಯಾಜ್ಯದಿಂದಲೇ. ದಿನಕ್ಕೆ ಮೂರು ಕೆ.ಜಿ. ಘನ, ದ್ರವ ತ್ಯಾಜ್ಯ ಬಳಸಿ ಎರಡು ಗಂಟೆಗೆ ಬೇಕಾಗುವಷ್ಟು ಗ್ಯಾಸ್ ತಯಾರಿ ಮಾಡಲಾಗುತ್ತದೆ. ಈ ಹಾಸ್ಟೆಲ್ನಲ್ಲಿ 35 ವಿದ್ಯಾರ್ಥಿಗಳಿದ್ದಾರೆ.

ಹಾಸ್ಟೆಲ್ಗೆ ಅಗತ್ಯ ಇರುವಷ್ಟು ಅಡುಗೆ ಅನಿಲ ಉತ್ಪಾದನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಸಮೀಪದ ಇನ್ನೊಂದು ಹಾಸ್ಟೆಲ್ ಹಾಗೂ ಅಂಗನವಾಡಿಯಲ್ಲೂ ಇದೇ ವ್ಯವಸ್ಥೆ ಅನುಷ್ಠಾನಕ್ಕೆ ಯೋಜಿಸಲಾಗಿದೆ ಎಂದು ಜಿ.ಪಂ. ಮೂಲಗಳು ತಿಳಿಸಿವೆ.

ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇರಿಂಜೆ ಶಾಲೆ, ಪೇರಿಂಜೆ ಅಂಗನವಾಡಿಯಲ್ಲೂ ತ್ಯಾಜ್ಯದಿಂದ ಅಡುಗೆ ಅನಿಲ ಉತ್ಪತ್ತಿ ಮಾಡಲಾಗುತ್ತಿದೆ. ಅಲ್ಲಿಯ ಬಡ್ಡಂದಡ್ಕ ಶಾಲೆ, ಉಜಿರೆ ಗ್ರಾಮ ಪಂಚಾಯಿತಿಯ ಹಳೆಪೇಟೆ ಶಾಲೆ, ಲಾಯಿಲ ಕರ್ನೋಡಿ ಅಂಗನವಾಡಿ, ಪಂಜಿಕಲ್ಲು ಗ್ರಾಮ ಪಂಚಾಯಿತಿಯ ಸೊರ್ನಾಡು ಅಂಗನವಾಡಿ, ದಡ್ಡಲಕಾಡು ಅಂಗನವಾಡಿಯಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಕಾಮಗಾರಿಗಳು ನಡೆಯುತ್ತಿವೆ. ಶಾಲೆ ಹಾಗೂ ಅಂಗನವಾಡಿಯ ತ್ಯಾಜ್ಯವನ್ನು ಅಡುಗೆ ಅನಿಲವನ್ನಾಗಿ ಪರಿವರ್ತಿಸಿ ಅಕ್ಷರದಾಸೋಹ ಹಾಗೂ ಅಂಗನವಾಡಿ ಅಡುಗೆಗೆ ಬಳಸಲಾಗುತ್ತಿದೆ.

`ವಿದ್ಯಾರ್ಥಿಗಳಲ್ಲಿ ಅಸಂಪ್ರದಾಯಿಕ ಶಕ್ತಿ ಮೂಲಗಳ ಬಳಕೆ ಪ್ರೇರೇಪಿಸುವ ಪ್ರಯತ್ನವಿದು. ಜತೆಗೆ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ ಗುರಿ ಹೊಂದಲಾಗಿದೆ. ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿದರೆ ನೂರಾರು ಮಕ್ಕಳು ವೀಕ್ಷಣೆ ಮಾಡಿ ಅವರೂ ಪ್ರಯೋಗ ಮಾಡಲು ಮುಂದಾಗುತ್ತಾರೆ~ ಎಂದು ಕೆ.ಎನ್. ವಿಜಯಪ್ರಕಾಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.