ಶನಿವಾರ, ಸೆಪ್ಟೆಂಬರ್ 25, 2021
22 °C

ದಾವಣಗೆರೆ: ‘ಎರಡೂ ಕೈಯಲ್ಲಿ 10 ರೀತಿಯಲ್ಲಿ ಬರೆಯಬಲ್ಲ ಆದಿ ಸ್ವರೂಪ ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಪಾರ ನೆನಪಿನ ಶಕ್ತಿಯುಳ್ಳ ಹಾಗೂ ಒಂದೇ ಪುಟದಲ್ಲಿ 93 ಸಾವಿರ ಚಿತ್ರ ಬಿಡಿಸುವ ಪರಿಣಿತಿ ಹೊಂದಿರುವ ಆದಿ ಸ್ವರೂಪ ಎಂಬ ಬಾಲಕಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ. ಮಾತ್ರವಲ್ಲ, ಎರಡೂ ಕೈಗಳ ಮೂಲಕ ಏಕಕಾಲಕ್ಕೆ 10 ರೀತಿಯಲ್ಲಿ ಬರೆದು ವಿಶ್ವದಾಖಲೆ ಮಾಡಿದ್ದಾಳೆ ಎಂದು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ತಿಳಿಸಿದರು.

ಮಂಗಳೂರು ಕೋಡಿಯಾಲುಬೈಲುವಿನ ಸ್ವರೂಪ ಅಧ್ಯಯನ ಕೇಂದ್ರ ಇದೆ. ಆದಿ ಸ್ವರೂಪ ಹತ್ತನೇ ತರಗತಿಯ ಸ್ಟೇಟ್ ಸಿಲೆಬಸ್‌ನ ಒಂದು ಪಾಠ ಪುಸ್ತಕದ ವಿಷಯಗಳನ್ನು ವಿಶ್ಯುವಲ್ ಮೆಮೋರಿ ಆರ್ಟ್ ಮೂಲಕ ಒಂದೇ ಪುಟದಲ್ಲಿ ರಚಿಸಿದ್ದಾಳೆ. ಆರು ವಿಷಯಗಳ ಹತ್ತು ಪುಸ್ತಕಗಳುಳ್ಳ 93 ಸಾವಿರ ಚಿಕಣಿ ಚಿತ್ರ ರಚಿಸುವ ಜೊತೆಗೆ ಅಗಾಧ ಶಕ್ತಿಯ ಸ್ಪರ್ಧೆಯಲ್ಲಿ ದಾಖಲೆ ಮಾಡಿದ್ದಾಳೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪಂಡಿತ್ ರವಿಕಿರಣ್ ಮಣಿಪಾಲ್ ಅವರಿಂದ ಹಾಗೂ ವಿದುಷಿ ಸುಮಂಗಲಾ ರತ್ನಾಕರ್ ಅವರಿಂದ ಯಕ್ಷಗಾನಕೆ ಅಭ್ಯಾಸ ಮಾಡಿದ್ದಾಳೆ. ಗಿಟಾರ್ ಕೀಬೋರ್ಡ್, ಮಿಮಿಕ್ರಿ ಬೀಟ್ ಬಾಕ್ಸ್, ಚಿತ್ರಕಲೆ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾಳೆ ಎಂದು ವಿವರಿಸಿದರು.

ಇನ್ ಕ್ರೆಡಿಬಲ್ ವಿಶ್ಯುವಲ್ಸ್ ಮೆಮೋರಿ ಆರ್ಟಿಸ್ಟ್ ಎಂದು ಹೆಸರು ಗಳಿಸಿರುವ ಆದಿಸ್ವರೂಪಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ. ಈಗ ಗಿನ್ನಿಸ್ ರೆಕಾರ್ಡ್‌ಗೆ ಅರ್ಹತೆ ಪಡೆದಿದ್ದಾಳೆ. ಹತ್ತನೆ ತರಗತಿಯ‌ ಆರು ಪಠ್ಯ ಪುಸ್ತಕಗಳ ಪೋರ್ಷನ್ ಕಾಣುವ ವಿಧಾನ ಹಾಗೂ ಸ್ವರೂಪದ 10 ನೆನಪಿನ ತಂತ್ರಗಳ ಮೂಲಕ 20 ಗಂಟೆಯಲ್ಲೇ ಪೂರ್ಣ ಮಾಡಿ ಒಂದೇ ವಾರದಲ್ಲಿ ಚಿತ್ರ ನೋಟ್ಸ್ ಅನ್ನು ಮಕ್ಕಳಿಂದ ಮಾಡಿಸುವ ಪ್ರದರ್ಶನಕ್ಕೆ ಸಿದ್ಧಳಾಗಿದ್ದಾಳೆ ಎಂದು ಹೇಳಿದರು.

ಸ್ವರೂಪ ಶಿಕ್ಷಣದ ಡೆವಲಪ್‍ಮೆಂಟ್ ಎಜುಕೇಶನ್ ಅನ್ನು ದೇಶದ ಎಲ್ಲ 741 ಜಿಲ್ಲೆಗಳಲ್ಲಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕೇವಲ ಸರ್ಟಿಫಿಕೇಟ್ ಶಿಕ್ಷಣಕ್ಕೊಂದು ಪರ್ಯಾಯವಾಗಲಿದೆ ಎಂದು ತಿಳಿಸಿದರು.

ದೇಶದಲ್ಲಿರುವ ಜಿಲ್ಲೆಗಳ, ರಾಜ್ಯದ ಎಲ್ಲ ತಾಲ್ಲೂಕುಗಳ ಹೆಸರುಗಳನ್ನು ಸುದ್ದಿಗೋಷ್ಠಿಯಲ್ಲಿ ಹೇಳುವ ಮೂಲಕ ಆದಿ ಸ್ವರೂಪ ಅಚ್ಚರಿ ಮೂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಮಾಡ್ಕರ್, ಸಿದ್ದರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.