ಸೋಮವಾರ, ಆಗಸ್ಟ್ 2, 2021
28 °C
ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ * ಒಟ್ಟು 468 ಮಂದಿ ಗುಣಮುಖ

17 ಮಂದಿಗೆ ಕೊರೊನಾ: ವೃದ್ಧೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ 17 ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ 85 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಕೊರೊನಾದಿಂದ ಸಾವು ಕಂಡವರ ಸಂಖ್ಯೆ 22ಕ್ಕೆ ಏರಿದೆ.

ತೀವ್ರ ಉಸಿರಾಟದ ತೊಂದರೆ ಇದ್ದ ಎಸ್ಎಸ್‌ ಲೇಔಟ್‌ನ ಅಜ್ಜಿಯನ್ನು ಜುಲೈ 10ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದಾರೆ. ಅವರಿಗೆ ಶ್ವಾಸಕೋಶದ ತೊಂದರೆ, ಅಧಿಕ ರಕ್ತದೊತ್ತಡ, ಮಧುಮೇಹ, ಜ್ವರ ಇತ್ತು.

ಹರಿಹರ ವಿನಾಯಕನಗರದ 30 ಮತ್ತು 33 ವರ್ಷದ ಮಹಿಳೆಯರು, 19 ವರ್ಷದ ಯುವತಿ, 14 ಬಾಲಕಿಗೆ ಕಂಟೈನ್‌ಮೆಂಟ್‌ ಸಂಪರ್ಕದಿಂದ ಕೊರೊನಾ ಬಂದಿದೆ. ಬೆಂಗಳೂರಿನಿಂದ ಹಿಂತಿರುಗಿರುವ ಅಲ್ಲಿನ 12 ವರ್ಷದ ಬಾಲಕಿಗೂ ಸೋಂಕು ಇರುವುದು ಗೊತ್ತಾಗಿದೆ.

ದಾವಣಗೆರೆಯ 29 ವರ್ಷದ ವ್ಯಕ್ತಿಗೆ ಸೋಂಕು ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಬೆಂಗಳೂರಿನಿಂದ ಹಿಂತಿರುಗಿರುವ ದಾವಣಗೆರೆ ಎಲ್‌ಐಸಿ ಕಾಲೊನಿಯ 29 ವರ್ಷದ ಮಹಿಳೆ ನಿಜಲಿಂಗಪ್ಪ ಬಡಾವಣೆಯ 45 ವರ್ಷದ ಪುರುಷ, ರಂಗನಾಥ ಬಡಾವಣೆಯ 28 ವರ್ಷದ ಮಹಿಳೆ, ಎಂಸಿಸಿ ಬಿ ಬ್ಲಾಕ್‌ನ 42 ವರ್ಷದ ಪುರುಷ, ವಿದ್ಯಾನಗರದ 55 ವರ್ಷದ ಪುರುಷ, ಎಸ್‌ಎಸ್‌ ಲೇಔಟ್‌ನ 31 ವರ್ಷದ ಪುರುಷರಿಗೆ ಸೋಂಕು ಇರುವುದು ಖಚಿತವಾಗಿದೆ.

ಬಳ್ಳಾರಿ ಜಿಲ್ಲೆ ಹೊಸಪೇಟೆ ಜೆ.ಪಿ.ನಗರದ 59 ವರ್ಷದ ಮಹಿಳೆ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೂ ವೈರಸ್‌ ಇರುವುದು ದೃಢಪಟ್ಟಿದೆ.

ದಾವಣಗೆರೆ ಬಸವನಾಳ್‌ನ 60 ವರ್ಷದ ಮತ್ತು ದೇವರಾಜ ಬಡಾವಣೆಯ 61 ವರ್ಷದ ವೃದ್ಧರಿಬ್ಬರಿಗೆ ಶೀತಜ್ವರ ಎಂದು ಗುರುತಿಸಲಾಗಿದೆ. ಎಂಸಿಸಿ ಎ ಬ್ಲಾಕ್‌ನ 45 ವರ್ಷದ ಪುರುಷ ಶೀತಜ್ವರ ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 598 ಮಂದಿಗೆ ಸೋಂಕು ತಗುಲಿದೆ. ಮಂಗಳವಾರ 37 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೂ ಸೇರಿ ಒಟ್ಟು 468 ಮಂದಿ ಗುಣಮುಖರಾಗಿದ್ದಾರೆ. 22 ಮಂದಿ ಮೃತಪಟ್ಟಿದ್ದಾರೆ. ಐವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.