ಶನಿವಾರ, ಜನವರಿ 23, 2021
22 °C
ಮೀಸಲಾತಿ ಎರಡೂವರೆ ವರ್ಷದವರೆಗೆ ಜಾರಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

195 ಗ್ರಾ.ಪಂ: 99 ಅಧ್ಯಕ್ಷ ಸ್ಥಾನ ಮಹಿಳೆಯರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯ ಒಟ್ಟು 195 ಗ್ರಾಮ ಪಂಚಾಯಿತಿಗಳಲ್ಲಿ 99 ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮುಂದಿನ 30 ತಿಂಗಳು ಅಂದರೆ ಎರಡೂವರೆ ವರ್ಷ ಈ ಮೀಸಲಾತಿ ಅನ್ವಯವಾಗುತ್ತದೆ.

ದಾವಣಗೆರೆ ತಾಲ್ಲೂಕಿನಲ್ಲಿ 42 ಪಂಚಾಯಿತಿಗಳಿದ್ದು, 21 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 10 ಸ್ಥಾನ (5 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 6 (3 ಮಹಿಳೆ), ಹಿಂದುಳಿದ ವರ್ಗ ಎಗೆ 4 (2 ಮಹಿಳೆ), ಹಿಂದುಳಿದ ವರ್ಷ ಬಿಗೆ 1 (1 ಮಹಿಳೆ), ಸಾಮಾನ್ಯ 21 (10 ಮಹಿಳೆ).

ಹರಿಹರ ತಾಲ್ಲೂಕಿನಲ್ಲಿ 24 ಪಂಚಾಯಿತಿಗಳಿದ್ದು, 12 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 4 ಸ್ಥಾನ (2 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 3 (2 ಮಹಿಳೆ), ಹಿಂದುಳಿದ ವರ್ಗ ಎಗೆ 4 (2 ಮಹಿಳೆ), ಹಿಂದುಳಿದ ವರ್ಷ ಬಿಗೆ 1 (1 ಮಹಿಳೆ), ಸಾಮಾನ್ಯ 12 (5 ಮಹಿಳೆ).

ಹೊನ್ನಾಳಿ ತಾಲ್ಲೂಕಿನಲ್ಲಿ 29 ಪಂಚಾಯಿತಿಗಳಿದ್ದು, 15 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 5 ಸ್ಥಾನ (3 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 2 (1 ಮಹಿಳೆ), ಹಿಂದುಳಿದ ವರ್ಗ ಎಗೆ 6 (3 ಮಹಿಳೆ), ಹಿಂದುಳಿದ ವರ್ಷ ಬಿಗೆ 1 (1 ಮಹಿಳೆ), ಸಾಮಾನ್ಯ 15 (7 ಮಹಿಳೆ).

ನ್ಯಾಮತಿ ತಾಲ್ಲೂಕಿನಲ್ಲಿ 17 ಪಂಚಾಯಿತಿಗಳಿದ್ದು, 9 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 3 ಸ್ಥಾನ (2 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 1(1 ಮಹಿಳೆ), ಹಿಂದುಳಿದ ವರ್ಗ ಎಗೆ 3 (2 ಮಹಿಳೆ), ಹಿಂದುಳಿದ ವರ್ಷ ಬಿಗೆ 1 (ಮಹಿಳೆಗಿಲ್ಲ), ಸಾಮಾನ್ಯ 9 (4 ಮಹಿಳೆ).

ಚನ್ನಗಿರಿ ತಾಲ್ಲೂಕಿನಲ್ಲಿ 61 ಪಂಚಾಯಿತಿಗಳಿದ್ದು, 31 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 12 ಸ್ಥಾನ (6 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 6 (3 ಮಹಿಳೆ), ಹಿಂದುಳಿದ ವರ್ಗ ಎಗೆ 10 (5 ಮಹಿಳೆ), ಹಿಂದುಳಿದ ವರ್ಷ ಬಿಗೆ 2 (1 ಮಹಿಳೆ), ಸಾಮಾನ್ಯ 31 (16 ಮಹಿಳೆ).

ಜಗಳೂರು ತಾಲ್ಲೂಕಿನಲ್ಲಿ 22 ಪಂಚಾಯಿತಿಗಳಿದ್ದು, 11 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 7 ಸ್ಥಾನ (4 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 6 (3 ಮಹಿಳೆ), ಸಾಮಾನ್ಯ 9 (4 ಮಹಿಳೆ). ಈ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗ ಎ ಮತ್ತು ಬಿಗೆ ಒಂದೇ ಒಂದುಸ್ಥಾನಗಳು ಮೀಸಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು