ಬುಧವಾರ, ಡಿಸೆಂಬರ್ 8, 2021
28 °C
1 ವರ್ಷದ ಮಗು ಸೇರಿ 11 ಮಕ್ಕಳು, 46 ಹಿರಿಯರು ಗುಣಮುಖರಾಗಿ ಬಿಡುಗಡೆ

240 ಮಂದಿಗೆ ಕೊರೊನಾ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 90 ವರ್ಷದ ವೃದ್ಧೆ ಸೇರಿ 240 ಮಂದಿಗೆ ಕೊರೊನಾ ಇರುವುದು ಮಂಗಳವಾರ ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ.

ಶಾಮನೂರಿನ 40 ವರ್ಷದ ಪುರುಷ ತೀವ್ರ ಉಸಿರಾಟದ ಸಮಸ್ಯೆಯಿಂದ ನಿಧನರಾದರು. ವಿನೋಬನಗರದ 46 ವರ್ಷದ ಪುರುಷ ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಮೃತಪಟ್ಟರು.

23 ವೃದ್ಧರು, 14 ವೃದ್ಧೆಯರು, 7 ಬಾಲಕರು, 7 ಬಾಲಕಿಯರು ಸೋಂಕಿಗೊಳಗಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 88 ಮಂದಿಗೆ ಕೊರೊನಾ ಬಂದಿದೆ. ಎಲೆಬೇತೂರಿನಲ್ಲೇ 10 ಮಂದಿಗೆ ಸೋಂಕು ತಗುಲಿದೆ. ಹಳಸಬಾಳು, ಆವರಗೊಳ್ಳ, ಬಾಡಾ, ಮಲಕೆರೆ, ಬುಳ್ಳಾಪುರ, ಐಗೂರು, ಫಲವನಹಳ್ಳಿ, ಬಸವನಾಳ್, ಹಳೇಬಾತಿ, ಹದಡಿ, ಬಿ. ಕಲಪನಹಳ್ಳಿ, ಆಲೂರಹಟ್ಟಿ, ಕಂದಗಲ್‌, ತುಂಬಿಗೆರೆ ಹೀಗೆ ಒಟ್ಟು 24 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ. 63 ಮಂದಿ ಪಾಲಿಕೆ ವ್ಯಾಪ್ತಿಯವರು.

ಜೆಜೆಎಂಎಂಸಿಯ ಹೌಸ್‌ ಸರ್ಜನ್‌, ಸ್ಟೂಡೆಂಟ್‌, ಸ್ಟಾಫ್‌ ಹೀಗೆ ನಾಲ್ವರಿಗೆ ಕೊರೊನಾ ಬಂದಿದೆ. ಬಾಪೂಜಿ ಡೆಂಟಲ್‌ ಕಾಲೇಜಿನ ಸಿಬ್ಬಂದಿಗೆ ಸೋಂಕು ತಗುಲಿದೆ. ಆರ್‌ಎಂಸಿ ಪೊಲೀಸ್‌ ಠಾಣೆಯ ಐವರು ಸಿಬ್ಬಂದಿಗೆ ವೈರಸ್‌ ಕಾಣಿಸಿಕೊಂಡಿದೆ. ಪೊಲೀಸ್ ಕ್ವಾರ್ಟರ್ಸ್‌ನ ಒಬ್ಬರು, ಎಸ್‌ಎಸ್‌ಐಎಂನ ಇಬ್ಬರು, ಸ್ಮಾರ್ಟ್‌ಸಿಟಿ ಕಚೇರಿಯ ಮೂವರು ಬಾಪೂಜಿ ಡೆಂಟಲ್‌ ಕಾಲೇಜಿನ ಒಬ್ಬರಿಗೆ ಸೋಂಕು ಬಂದಿದೆ.

ಚನ್ನಗಿರಿ ತಾಲ್ಲೂಕಿನ 45, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 43, ಹರಿಹರ ತಾಲ್ಲೂಕಿನ 41, ಜಗಳೂರು ತಾಲ್ಲೂಕಿನ 15 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಣೆಬೆನ್ನೂರಿನ ಮೂವರು, ಹಾವೇರಿಯ ಇಬ್ಬರು, ಕೂಡ್ಲಿಗಿ, ಹರಪನಹಳ್ಳಿ, ಚಿತ್ರದುರ್ಗದ ತಲಾ ಒಬ್ಬರು ಹೀಗೆ ಜಿಲ್ಲೆಯ ಹೊರಗಿನ 8 ಮಂದಿಯಲ್ಲಿ ಸೋಂಕು ಕಂಡು ಬಂದಿದೆ.

1 ವರ್ಷದ ಹೆಣ್ಣು ಶಿಶು ಸೇರಿ 198 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ 9 ಬಾಲಕಿಯರು, 2 ಬಾಲಕರು, 28 ವೃದ್ಧರು, 18 ವೃದ್ಧೆಯರು ಒಳಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 11,637 ಮಂದಿಗೆ ಕೊರೊನಾ ಬಂದಿದೆ. 8564 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 218 ಮಂದಿ ಮೃತಪಟ್ಟಿದ್ದಾರೆ. 2855 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಐಸಿಯುನಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು