ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಚಗಟ್ಟ: ಸಿಡಿಲಿಗೆ 25 ಮೇಕೆ ಸಾವು

Published 18 ಏಪ್ರಿಲ್ 2024, 16:31 IST
Last Updated 18 ಏಪ್ರಿಲ್ 2024, 16:31 IST
ಅಕ್ಷರ ಗಾತ್ರ

ಮಾಯಕೊಂಡ: ಸಮೀಪದ ಈಚಗಟ್ಟ ಗ್ರಾಮದ ಜಮೀನಿನ ಬಳಿ ಗುರುವಾರ ಸಿಡಿಲು ಬಡಿದು 25 ಮೇಕೆಗಳು ಸಾವನ್ನಪ್ಪಿದ್ದು, ಮೇಕೆ ಸಾಕಣೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಈಚಗಟ್ಟ ಗ್ರಾಮದ ರೇವಣಿಬಾಯಿ ಅವರಿಗೆ ಸೇರಿದ ಮೇಕೆಗಳನ್ನು ಎಂದಿನಂತೆ ಮೇಯಿಸಿಕೊಂಡ ಮನೆಗೆ ಮರಳುವ ವೇಳೆ ಗುಡುಗು ಸಿಡಿಲಿನ ಆರ್ಭಟ ಹೆಚ್ಚಾಗಿದ್ದರಿಂದ ಮೇಕೆಗಳು ಬಲಿಯಾಗಿವೆ.

‘ಮೇಕೆ ಸಾಕಣೆಯಿಂದಲೇ ಬದುಕು ಕಟ್ಟಿಕೊಂಡಿದ್ದೆವು. ಈಗ ಎಲ್ಲ ಮೇಕೆಗಳು ಸಿಡಿಲಿಗೆ ಬಲಿಯಾಗಿದ್ದು, ಜೀವನ ನಡೆಸುವುದು ಹೇಗೆ ?’ ಎಂದು ರೇವಣಿಬಾಯಿ ಅಳಲು ತೋಡಿಕೊಂಡರು.

ಶಾಸಕ ಕೆ.ಎಸ್. ಬಸವಂತಪ್ಪ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪಶು ಇಲಾಖೆ ಅಧಿಕಾರಿ ಡಾ.ನಾಗರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು.

ಗ್ರಾಮ ಆಡಳಿತ ಅಧಿಕಾರಿ ಹನುಮಂತಪ್ಪ, ಮಾಯಕೊಂಡ ಪೊಲೀಸ್ ಠಾಣೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT