257 ಮಂದಿಗೆ ಕೊರೊನಾ: ಬಾರದ ಜಿಲ್ಲಾ ಬುಲೆಟಿನ್

ದಾವಣಗೆರೆ: ಜಿಲ್ಲೆಯಲ್ಲಿ 257 ಮಂದಿಗೆ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಆದರೆ ವೈದ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ವರದಿಗಳನ್ನು ನೀಡುವುದಿಲ್ಲ ಎಂದು ನಿರ್ಧರಿಸಿರುವುದರಿಂದ ಕೊರೊನಾಕ್ಕೆ ಸಂಬಂಧಿಸಿದ ಜಿಲ್ಲಾ ಬುಲೆಟಿನ್ ನೀಡಿಲ್ಲ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14 ಸಾವಿರ (14,097) ದಾಟಿದೆ. 10733 ಮಂದಿ ಗುಣಮುಖರಾಗಿದ್ದಾರೆ. 228 ಮಂದಿ ಮೃತಪಟ್ಟಿದ್ದಾರೆ. 3,136 ಸಕ್ರಿಯ ಪ್ರಕರಣಗಳಿವೆ.
ಜಗಳೂರು: ಇಬ್ಬರ ಸಾವು
ಕೊರೊನಾ ಸೋಂಕಿನಿಂದ ಗುರುವಾರ ಇಬ್ಬರು ಮೃತಪಟ್ಟಿದ್ದಾರೆ. ಶಿಕ್ಷಕ ರವಿ ಹಾಗೂ ಹೆಡ್ ಕಾನ್ಸ್ಟೆಬಲ್ ಗೋಣಿಬಸಪ್ಪ ಮೃತಪಟ್ಟವರು.
ಮಲೆಬೆನ್ನೂರು 11 ಜನರಿಗೆ ಕೊರೊನಾ
ಮಲೇಬೆನ್ನೂರು ಪಟ್ಟಣದ ಸೇರಿ ಹೋಬಳಿ ವ್ಯಾಪ್ತಿಯಲ್ಲಿ 11 ಮಂದಿಗೆ ಕೊರೊನಾ ಸೋಂಕು ಗುರುವಾರ ತಗುಲಿದೆ.
ಪಟ್ಟಣದ ವೃದ್ಧ, ನಂದಿಗಾವಿಯ ಇಬ್ಬರು ಪುರುಷರು, ಹರಳಹಳ್ಳಿ ಇಬ್ಬರು ಪುರುಷರು, ಮಹಿಳೆ, ಗುಳದಹಳ್ಳಿಯ ಮಹಿಳೆ, ನಿಟ್ಟೂರಿನ ಮೂವರು ಮಹಿಳೆಯರು, ಭಾನುವಳ್ಳಿ ಪುರುಷನಿಗೆ ಕೊರೊನಾ ಬಂದಿದೆ.
ಸಾಸ್ವೆಹಳ್ಳಿ: ಯುವಕ ಸಾವು
ಸಾಸ್ವೆಹಳ್ಳಿ ಸಮೀಪದ ಹೊಟ್ಯಾಪುರದ 36 ವರ್ಷದ ಪುರುಷ ಕೊರೊನಾದಿಂದ ಗುರುವಾರ ಮೃತಪಟ್ಟಿದ್ದಾರೆ. ಕೋವಿಡ್ ನಿಯಮ ಪ್ರಕಾರ ಹೊಟ್ಯಾಪುರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಸಾಸ್ವೆಹಳ್ಳಿಯ ಪುರುಷ, ಹೊಟ್ಯಾಪುರದ ವೃದ್ಧರೊಬ್ಬರಿಗೆ ಕೊರೊನಾ ಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.