ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

323 ಮಂದಿಗೆ ಕೊರೊನಾ: 129 ಜನ ಗುಣಮುಖ

ದಾವಣಗೆರೆ 155, ಹರಿಹರ 95, ಹೊನ್ನಾಳಿ–ನ್ಯಾಮತಿ 29, ಚನ್ನಗಿರಿ 27, ಜಗಳೂರು 11 ಮಂದಿಗೆ ಸೋಂಕು
Last Updated 14 ಸೆಪ್ಟೆಂಬರ್ 2020, 16:06 IST
ಅಕ್ಷರ ಗಾತ್ರ

ದಾವಣಗೆರೆ: 90 ವರ್ಷದ ವೃದ್ಧ ಸೇರಿ ಜಿಲ್ಲೆಯಲ್ಲಿ 323 ಮಂದಿಗೆ ಕೊರೊನಾ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 13 ಸಾವಿರ ದಾಟಿದೆ.

48 ವೃದ್ಧರು, 17 ವೃದ್ಧೆಯರು, 1 ವರ್ಷದ ಮಗು ಸೇರಿ 10 ಬಾಲಕಿಯರು, 8 ಬಾಲಕರಿಗೆ ಕೊರೊನಾ ಬಂದಿದೆ.

ದಾವಣಗೆರೆ ತಾಲ್ಲೂಕಿನಲ್ಲಿ155 ಮಂದಿಗೆ ಸೋಂಕು ತಗುಲಿದೆ. ಗೋಪನಾಳ್‌, ಕಕ್ಕರಗೊಳ್ಳ, ದೊಗ್ಗಳ್ಳಿ, ಆನಗೋಡು, ಹೂವಿನಮಡು, ಮಾರಕೊಂಡ, ಕಂದಗಲ್‌, ಹೊನ್ನೂರು, ಹಳೇಬಿಸಲೇರಿ, ದೊಡ್ಡಬಾತಿ, ಬಾತಿ, ಬಸಾಪುರ, ಪುಟಗನಾಳ್‌ ಹೀಗೆ 25 ಮಂದಿ ಗ್ರಾಮೀಣ ಪ್ರದೇಶದವರು. 120 ಮಂದಿ ಮಹಾನಗರ ಪಾಲಿಕೆ ವ್ಯಾಪ್ತಿಯವರು.

ಬಾಪೂಜಿ ಆಸ್ಪತ್ರೆ, ಚಿಗಟೇರಿ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಕಾರ್ಯಾಗಾರ, ತಾಲ್ಲೂಕು ಪಂಚಾಯಿತಿಯ ಸಿಬ್ಬಂದಿಗೂ ಕೊರೊನಾ ಬಂದಿದೆ. ನಿಟುವಳ್ಳಿ, ಸಿದ್ದವೀರಪ್ಪ ಬಡಾವಣೆ, ಎಸ್‌ಎಸ್‌ ಬಡಾವಣೆ, ತರಳಬಾಳು ಬಡಾವಣೆ, ಎಂಸಿಸಿ ಬಿ ಬ್ಲಾಕ್‌, ವಿದ್ಯಾನಗರ, ಪಿ.ಜೆ. ಬಡಾವಣೆ, ದೇವರಾಜ ಅರಸು ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ, ಸರಸ್ವತಿ ನಗರ ಮುಂತಾದ ಕಡೆಗಳಲ್ಲಿ 5ಕ್ಕಿಂತ ಅಧಿಕ ಪ್ರಕರಣಗಳು ಕಂಡು ಬಂದಿವೆ.

ಹರಿಹರ ತಾಲ್ಲೂಕಿನಲ್ಲಿ 95, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 29, ಚನ್ನಗಿರಿ ತಾಲ್ಲೂಕಿನಲ್ಲಿ 27, ಜಗಳೂರು ತಾಲ್ಲೂಕಿನಲ್ಲಿ 11 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರಪನಹಳ್ಳಿಯ ಮೂವರು, ಚಿತ್ರದುರ್ಗದ ಇಬ್ಬರು, ರಾಣೆಬೆನ್ನೂರಿನ ಒಬ್ಬರಿಗೂ ಕೊರೊನಾ ಬಂದಿದೆ.

129 ಮಂದಿ ಗುಣಮುಖರಾಗಿ ಸೋಮವಾರ ಬಿಡುಗಡೆಗೊಂಡಿದ್ದಾರೆ. 90 ವರ್ಷದ ಅಜ್ಜಿ ಸೇರಿ 9 ವೃದ್ಧೆಯರು, 15 ವೃದ್ಧರು, ನಾಲ್ವರು ಬಾಲಕರು, ಇಬ್ಬರು ಬಾಲಕಿಯರು ಒಳಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 13,220 ಮಂದಿಗೆ ಸೋಂಕು ತಗುಲಿದೆ. 10,422 ಮಂದಿ ಗುಣಮುಖರಾಗಿದ್ದಾರೆ. 226 ಮಂದಿ ಮೃತಪಟ್ಟಿದ್ದಾರೆ. 2,572 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT