ಬುಧವಾರ, ಆಗಸ್ಟ್ 17, 2022
25 °C
₹ 10.16 ಕೋಟಿ ಪರಿಹಾರ: ರಾಜೀಯಾಗಬಲ್ಲ 20 ಕ್ರಿಮಿನಲ್‌ ಅಪರಾಧ ಇತ್ಯರ್ಥ

ಇ–ಅದಾಲತ್‌ನಲ್ಲಿ 3,988 ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ನಡೆದ ಮೆಗಾ ಇ-ಲೋಕ್ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ 224 ಪ್ರಕರಣಗಳು ಮತ್ತು ವಿಚಾರಣೆಗೆ ಬಾಕಿ ಇದ್ದ 3,764 ಒಟ್ಟು 3,988 ಪ್ರಕರಣಗಳು ಇತ್ಯರ್ಥಗೊಂಡಿವೆ. ₹ 10.16 ಕೋಟಿ ಪರಿಹಾರ ಕೊಡಿಸಲಾಯಿತು.

ರಾಜೀಯಾಗಬಲ್ಲ ಕ್ರಿಮಿನಲ್‌ ಅಪರಾಧಗಳು 20 ಇತ್ಯರ್ಥಗೊಂಡಿವೆ. ₹ 32,500 ಪರಿಹಾರ ಒದಗಿಸಲಾಗಿದೆ. 63 ಚೆಕ್‌ ಬೌನ್ಸ್‌ ಪ್ರಕರಣಗಳನ್ನು ರಾಜಿಯಲ್ಲಿ ಮುಗಿಸಲಾಗಿದೆ. ₹ 1.15 ಕೋಟಿ ಪರಿಹಾರದ ತೀರ್ಪು ನೀಡಲಾಗಿದೆ.

ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ 35 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ₹ 22.14 ಲಕ್ಷ ಪರಿಹಾರ ಒದಗಿಸಲಾಯಿತು. ಬಾಕಿ ಪ್ರಕರಣಗಳಲ್ಲಿ 8 ಇತ್ಯರ್ಥಪಡಿಸಿ ₹ 16.87 ಲಕ್ಷ ಪರಿಹಾರ ಕೊಡಿಸಲಾಯಿತು.

ಹಣ ವಸೂಲಾತಿ ಪ್ರಕರಣಗಳಲ್ಲಿ ಬಾಕಿ ಇದ್ದವುಗಳಲ್ಲಿ 7 ಪ್ರಕರಣ ಇತ್ಯರ್ಥಗೊಂಡು ₹ 14.31 ಲಕ್ಷ ಕೊಡಿಸಲಾಯಿತು.

ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ 96 ಪ್ರಕರಣಗಳು ರಾಜೀಯಲ್ಲಿ ಮುಗಿಸಲಾಯಿತು. ಸಂತ್ರಸ್ತರಿಗೆ ₹ 3.98 ಕೋಟಿ ಪರಿಹಾರ ಒದಗಿಸಲಾಯಿತು. ಕಾರ್ಮಿಕರಿಗೆ ಸಂಬಂಧಿಸಿದ 3 ಸಮಸ್ಯೆ ಸರಿಪಡಿಸಲಾಯಿತು. ₹ 11.5 ಲಕ್ಷ ಕೊಡಿಸಲಾಯಿತು.

ವಿದ್ಯುತ್‌ಗೆ ಸಂಬಂಧಿಸಿದಂತೆ 156 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 4.47 ಲಕ್ಷ ಪರಿಹಾರ ನೀಡಲು ಆದೇಶ ನೀಡಲಾಯಿತು. ಬಾಡಿಗೆ ವಿವಾದ ಸಹಿತ ಇತರ ನಾಗರಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ 175 ಇತ್ಯರ್ಥಪಡಿಸಿ ₹ 3.94 ಕೋಟಿ ಪರಿಹಾರ ನೀಡಲು ಆದೇಶಿಸಲಾಯಿತು.

ಇತರ ಪಿಟ್ಟಿ ಕೇಸ್‌ ಸಹಿತ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2952 ರಾಜಿಯಲ್ಲಿ ಮುಗಿದವು. ₹ 36.19 ಪರಿಹಾರ ಒದಗಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಗೀತಾ ಕೆ.ಬಿ. ನೇತೃತ್ವದಲ್ಲಿ ಜಿಲ್ಲೆಯ ಎಲ್ಲ 24 ನ್ಯಾಯಾಲಯಗಳಲ್ಲಿ ಇ–ಲೋಕ ಅದಲಾತ್‌ ನಡೆಯಿತು ಎಂದು ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು