ಬುಧವಾರ, ಅಕ್ಟೋಬರ್ 28, 2020
29 °C

41 ಮಂದಿಗೆ ಕೊರೊನಾ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 41 ಮಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಒಬ್ಬರು ಮೃತಪಟ್ಟಿದ್ದಾರೆ. 195 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ತಾಲ್ಲೂಕಿನ ಕಬ್ಬೂರು ನಿವಾಸಿ 45 ವರ್ಷದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ನಿಧನರಾದರು.

ದಾವಣಗೆರೆ ತಾಲ್ಲೂಕಿನಲ್ಲಿ 18, ಹರಿಹರ ತಾಲ್ಲೂಕಿನಲ್ಲಿ 9, ಹೊನ್ನಾಳಿ ನ್ಯಾಮತಿ ತಾಲ್ಲೂಕಿನಲ್ಲಿ 8, ಚನ್ನಗಿರಿ ತಾಲ್ಲೂಕಿನಲ್ಲಿ 6 ಮಂದಿಗೆ ಕೊರೊನಾ ಬಂದಿದೆ.

ಜಿಲ್ಲೆಯಲ್ಲಿ ಈವರೆಗೆ 19,180 ಮಂದಿಗೆ ಸೋಂಕು ತಗುಲಿದೆ. 17,694 ಮಂದಿ ಗುಣಮುಖರಾಗಿದ್ದಾರೆ. 251 ಮಂದಿ ಮೃತಪಟ್ಟಿದ್ದಾರೆ. 1,235 ಸಕ್ರಿಯ ಪ್ರಕರಣಗಳಿವೆ.

8 ಜನರಿಗೆ ಕೊರೊನಾ ಸೋಂಕು

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ 8 ಜನರಿಗೆ ಕೊರೊನಾ ಸೋಂಕು ಶನಿವಾರ ತಗುಲಿರುವುದು ಖಚಿತಪಟ್ಟಿದೆ.

ಪಟ್ಟಣದ ಇಬ್ಬರು, ವಿನಾಯಕ ನಗರ, ಎಕ್ಕೆಗೊಂದಿ, ಕುಂಬಳೂರು, ಹೊಸಪಾಳ್ಯ, ಕೊಕ್ಕನೂರು ಗ್ರಾಮದ ತಲಾ ಒಬ್ಬರಿಗೆ ಕೊರೊನಾ ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.